ದರ್ಶನ್‌ ನೋಡಲು ಬಳ್ಳಾರಿ ಸೆಂಟ್ರಲ್ ಜೈಲಿಗೆ ಓಡೋಡಿ ಬಂದ ವಿಜಯಲಕ್ಷ್ಮಿ

Public TV
1 Min Read

ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ (Vijayalakshmi) ಬಳ್ಳಾರಿ ಜೈಲಿಗೆ ಶನಿವಾರ ಭೇಟಿ ನೀಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶೀಫ್ಟ್‌ ಮಾಡಲಾಗಿತ್ತು. ಇತ್ತ ಪೊಲೀಸರು ದರ್ಶನ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹೊತ್ತಿನಲ್ಲೇ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’

KA-05 MA- 7999 ಕಾರಿನಲ್ಲಿ ಪುತ್ರ ವಿನೀಶ್‌ ಹಾಗೂ ದರ್ಶನ್‌ ಪರ ವಕೀಲರೊಂದಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ರನ್ನ 8ನೇ ಬಾರಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು. ಪ್ರತಿ ವಾರ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ರನ್ನ ಭೇಟಿಯಾಗಿ ಸಮಾಧಾನ ಹೇಳುತ್ತಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ – ಗೃಹಸಚಿವರ ಭೇಟಿಯಾದ ತನಿಖಾಧಿಕಾರಿ

ಇದೀಗ ದರ್ಶನ್‌ರನ್ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ 3ನೇ ದಿನ ವಿಜಯಲಕ್ಷ್ಮಿ ಅವರು, ದರ್ಶನ್‌ರನ್ನ ಭೇಟಿಯಾಗಿದ್ದಾರೆ. ದರ್ಶನ್‌ ಆರೋಗ್ಯ ವಿಚಾರಿಸಲಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ದರ್ಶನ್‌ ಜೊತೆಗೆ ಚರ್ಚಿಸಲಿದ್ದಾರೆ ಎಂದು ತಿಳುದುಬಂದಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ – ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪ್ರಾಂಶುಪಾಲರ ಅಮಾನತು

Share This Article