ಎಲ್ಲವೂ ಸರಿಯಾಗಿದಿದ್ದಿದ್ರೆ ನಟ ದರ್ಶನ್ ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿದ್ರು. ಆದರೆ ಇದೀಗ ಜೈಲಲ್ಲಿ ಆಚರಿಸಿಬೇಕಾಗಿದೆ. ಸಾಮಾನ್ಯವಾಗಿ ನಟ ದರ್ಶನ್ ಹಬ್ಬಗಳಲ್ಲಿ ಶುಭಾಶಯ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರು. ಕಳೆದ ವರ್ಷವೂ ದರ್ಶನ್ ಪಾಲಿನ ಗೌರಿ ಗಣೇಶ ಹಬ್ಬ ಜೈಲಲ್ಲೇ ನಡೀತು, ಈ ವರ್ಷವೂ ಜೈಲೇ ಕಂಟಿನ್ಯೂ ಆಗಿದೆ. ಇಂಥಹ ವಿಪರ್ಯಾಸದಲ್ಲೂ ವಿಜಯಲಕ್ಷ್ಮಿ ಪತಿ ಜೊತೆ ಫೋಟೋ ಪೋಸ್ಟ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.
ಫಾರ್ಮ್ಹೌಸ್‌ನಲ್ಲಿ ಪೂಜಾ ಸಮಯವೊಂದರಲ್ಲಿ ತೆಗೆದಿರುವ ಫೋಟೋವನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಬಹುಶಃ ದರ್ಶನ್ ಹೊರಗಡೆ ಇದ್ದಿದ್ರೆ ಸಂಭ್ರಮದಿಂದ ಈ ಬಾರಿಯಾದರೂ ಗೌರಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದರೋ ಏನೋ, ಆದರೆ ಈ ಬಾರಿಯೂ ಪರಪ್ಪನ ಅಗ್ರಹಾರದಲ್ಲೇ ಗಣೇಶ ಪ್ರಸಾದ ಸವಿಯಬೇಕಾದ ಪರಿಸ್ಥಿತಿ ಬಂದಿದೆ.
ಒಟ್ನಲ್ಲಿ ಎಲ್ಲಾ ದುಗುಡ ದುಮ್ಮಾನದ ನಡುವೆಯೂ ವಿಜಯಲಕ್ಷ್ಮಿ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಟೀಕೆ ಟಿಪ್ಪಣಿಗೆ ಅವಕಾಶ ನೀಡಲೇಬಾರದು ಎಂದು ತೀರ್ಮಾನಿಸಿ ಕಾಮೆಂಟ್ಸ್ ಸೆಕ್ಷನ್‌ನ್ನು ಆಫ್ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್.