ಸುಪ್ರೀಂನಿಂದ ಜಾಮೀನು ರದ್ದು ಬೆನ್ನಲ್ಲೇ ನಟ ದರ್ಶನ್ (Actor Darshan) ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸೋಮವಾರ ಪತಿಯನ್ನು ನೋಡೋಕೆ ತೆರಳಿದ್ದ ಪತ್ನಿ ವಿಜಯಲಕ್ಷ್ಮಿ ಗಂಟೆಗಟ್ಟಲೆ ಕಾದು ಬಳಿಕ ಭೇಟಿಯಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಬಾರಿ ಜೈಲು ಸೇರಿದ್ದಾರೆ. ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ವಿಐಪಿ ಟ್ರೀಟ್ಮೆಂಟ್ ಸಿಗುತ್ತಿತ್ತು. ಜೊತೆಗೆ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಕೂಡ ಸ್ಪೆಷಲ್ ಎಂಟ್ರಿಯಲ್ಲಿ ಬಂದು ದರ್ಶನ್ ಅವರನ್ನು ಭೇಟಿಯಾಗುತ್ತಿದ್ದರು. ಆಗ ಐದು ನಿಮಿಷ ಕಾದರೆ ಸಾಕು ದರ್ಶನ್ ಸಿಗುತ್ತಿದ್ದರು. ಆದರೆ ಈ ಬಾರಿ ಸುಪ್ರೀಂ ಕೋರ್ಟ್ ಸ್ಟ್ರಿಕ್ಟ್ ಆದೇಶದ ಬೆನ್ನಲ್ಲೇ ದರ್ಶನ್‌ಗೆ ವಿಐಪಿ ಟ್ರೀಟ್ಮೆಂಟ್ ಬಂದ್ ಆಗಿದೆ.
ಸೋಮವಾರ ದರ್ಶನ್ ನೋಡಲು ಜೈಲು ಬಳಿ ಹೋಗಿದ್ದ ಪತ್ನಿ ವಿಜಯಲಕ್ಷ್ಮಿ ಸುಮಾರು ಎರಡೂವರೆ ಗಂಟೆ ಕಾದ ಬಳಿಕ ದರ್ಶನ್ ನೋಡಿ ಮಾತನಾಡಿಸಿಕೊಂಡು ಬಂದಿದ್ದಾರೆ. ಜನರಲ್ ಎಂಟ್ರಿಯಲ್ಲಿ ಕಳಿಸಿ ಕಬ್ಬಿಣದ ಜಾಲರಿಯಿಂದ ದರ್ಶನ್ ಜೊತೆ ಮಾತಾಡುವಂತಾಗಿದೆ. ಜೈಲಲ್ಲಿ ದರ್ಶನ್ ಪರಿಸ್ಥಿತಿ ಹಾಗೂ ತಮಗಾದ ಅನುಭವ ನೆನೆದು ವಿಜಯಲಕ್ಷ್ಮಿ ಭಾವುಕರಾಗಿ ಹೊರಬಂದಿದ್ದಾರೆ.