ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ

Public TV
1 Min Read

ನ್ನಡದ ಸ್ಟಾರ್ ನಟ ದರ್ಶನ್ (Darshan) ಅವರು ಕೊಲೆ ಪ್ರಕರಣದ ಸಂಬಂಧ ಆರೋಪಿಯಾಗಿ ಜೈಲು ಪಾಲಾಗಿದ್ದಾರೆ. ಅ.14ರಂದು ಜಾಮೀನು ದೊರಕುವ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ದರ್ಶನ್ ಸಿನಿಮಾದ ಪೋಸ್ಟರ್‌ವೊಂದನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. ‘ನವಗ್ರಹ’ (Navagraha) ಚಿತ್ರ ಮರು ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ಶೇರ್ ಮಾಡಿ, ಏನೇ ಆಗಲಿ ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ ಎಂದು ವಿಜಯಲಕ್ಷ್ಮಿ (Vijayalakshmi) ಬರೆದುಕೊಂಡಿದ್ದಾರೆ.

‘ನವಗ್ರಹ’ ಸಿನಿಮಾದ ಪೋಸ್ಟರ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಪ್ರೀತಿಯ ಡಿಬಾಸ್ ಸೆಲೆಬ್ರಿಟಿಗಳೆ, ಎಲ್ಲರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ‘ನವಗ್ರಹ’ ಸಿನಿಮಾ ಆದಷ್ಟು ಬೇಗ ಮರು ಬಿಡುಗಡೆ ಆಗಲಿದೆ. ಈ ಬಾರಿ ಸಿನಿಮಾ ನೋಡುವ ಅನುಭವ ಇನ್ನಷ್ಟು ಭಿನ್ನವಾಗಿರಲಿದೆ. ಈ ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ತಪ್ಪದೆ ನೋಡಿ ಎಂದಿದ್ದಾರೆ.

ಏನೇ ಆಗಲಿ ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ದಿನವಿದು. ಸದಾ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ, ಆ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಆಶೀರ್ವಾದ ನೀಡಲಿ ಎಂದಿದ್ದಾರೆ. ಈ ಮೂಲಕ ದರ್ಶನ್ ಜೈಲಿನಿಂದ ಹೊರಗೆ ಬರಲಿದ್ದಾರೆ ಎಂಬುದನ್ನು ಹೀಗೆ ಸೂಚ್ಯವಾಗಿ ವಿಜಯಲಕ್ಷ್ಮಿ ಹೇಳಿದ್ದಾರೆಂದು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.

ಅಂದಹಾಗೆ, ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ದರ್ಶನ್ ಜೂನ್ 11ರಂದು ಅರೆಸ್ಟ್ ಆಗಿದ್ದರು. ಇಂದಿಗೆ ಜೈಲು ಪಾಲಾಗಿ 4 ತಿಂಗಳಾಗಿವೆ.

Share This Article