ರಾಮನ ಬಾಣ ಹುಸಿಯಿಲ್ಲ, ಸುರರು-ಅಸುರರು ಕಾದಾಡಿದರು, ಭಕ್ತಕೋಟಿಗೆ ಮಂಗಳವಾಯಿತು: ಮೈಲಾರಲಿಂಗ ಸ್ವಾಮಿ ಕಾರ್ಣಿಕ

By
2 Min Read

ಚಿಕ್ಕಮಗಳೂರು: ಜಿಲ್ಲೆ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮೈಲಾರಲಿಂಗ ಸ್ವಾಮಿ (Mylara Lingeshwara Swamy) ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದ್ದು ಜಗತ್ತು ಶಾಂತಿ ಬಯಸಲಿದೆ ಎಂದು ಹೇಳಿದೆ.

ವಿಜಯದಶಮಿಯ (Vijayadashami) ಮರುದಿನವಾದ ಇಂದು ಬೆಳಗ್ಗಿನ ಜಾವ 4:42 ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದೆ. ಇಡೀ ದಿನ ಉಪವಾಸವಿದ್ದು ಬೆಳಗ್ಗಿನದ ಪೂಜೆ ಬಳಿಕ ಬಿಲ್ಲನ್ನೇರಿ ದಶರಥ ಪೂಜಾರ್ ಅವರು ಭವಿಷ್ಯವಾಣಿ ನುಡಿದಿದ್ದಾರೆ.

ಭವಿಷ್ಯವಾಣಿ ಏನು?
ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು-ಅಸುರರು ಕಾದಾಡಿದರು. ಭಕ್ತಕೋಟಿಗೆ ಮಂಗಳವಾಯಿತು. ಶಾಂತಿ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದಿರಬೇಕು ಎಂದು ಭವಿಷ್ಯವಾಣಿ ನುಡಿದಿದ್ದಾರೆ.

 


ವಿಶ್ಲೇಷಣೆ ಏನು?
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ : ರಾಮ ಇಟ್ಟ ಬಾಣ ಹೇಗೆ ಗುರಿ ತಪ್ಪುವುದಿಲ್ಲವೋ ಅದೇ ರೀತಿ ಮೈಲಾರಲಿಂಗ ಹೇಳುವ ಮಾತು ತಪ್ಪುವುದಿಲ್ಲ.   ಇದನ್ನೂ ಓದಿ: ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್

ಸುರರು-ಅಸುರರು ಕಾದಾಡಿದರು : ಈಗಾಗಲೇ ಜಗತ್ತಿನಲ್ಲಿ ಯುದ್ಧಗಳು ಆರಂಭವಾಗಿವೆ. ಉಕ್ರೇನ್-ರಷ್ಯಾದ ಬಳಿಕ ಹಮಾಸ್-ಇಸ್ರೇಲ್ ಮಧ್ಯೆ ಯುದ್ಧವಾಗುತ್ತಿದೆ. ಅಮೆರಿಕ ಇಸ್ರೇಲ್‍ಗೆ ಸಹಾಯ ಮಾಡುತ್ತಿದ್ದರೆ, ಕೆಲ ದೇಶಗಳು ಪ್ಯಾಲೆಸ್ತೇನ್‌ ಬೆಂಬಲ ನೀಡುತ್ತಿದ್ದಾರೆ. ಮುಂದೆಯೂ ಇಂತಹಾ ಸನ್ನಿವೇಶ ನಿರ್ಮಾಣವಾಗಬಹುದು.

ಶಾಂತಿ-ಮಂತ್ರ ಪಠಿಸಿದರು : ಜಗತ್ತಿನ ಮೇಲಿಂದ ಮೇಲೆ ಯುದ್ಧಗಳಾಗುತ್ತಿವೆ. ದೇಶಗಳು ಸೇರಿ ಜನ ಶಾಂತಿ ಮಂತ್ರ ಪಠಿಸುವ ಸ್ಥಿತಿ ನಿರ್ಮಾಣವಾಗಿದೆ. ಜಗತ್ತು ಶಾಂತಿ ಬಯಸಿದೆ.

 

ಸರ್ವರು ಎಚ್ಚರದಿಂದ ಇರಬೇಕು : ವಿಶ್ವದಲ್ಲಿ ಸಿದ್ಧಾಂತ ಸೇರಿದಂತೆ ನಾನಾ ಕಾರಣಗಳಿಂದಾಗಿ ಯುದ್ಧಗಳು ನಡೆಯುತ್ತಿವೆ. ಮುಂದೆಯೂ ನಡೆಯಬಹುದು. ದೇಶಗಳು ಸೇರಿದಂತೆ ಜನರು ಎಚ್ಚರದಿಂದ ಇರಬೇಕು ಎಂದು ಮೈಲಾರಲಿಂಗ ಸ್ವಾಮಿಯ ನುಡುಮುತ್ತುಗಳನ್ನು ಹಿರಿಯರು ವಿಶ್ಲೇಷಿಸಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ಮೈಲಾರಲಿಂಗಸ್ವಾಮಿ ಭವಿಷ್ಯವಾಣಿಯಲ್ಲಿ ಮಳೆ ಬಗ್ಗೆ ಹೇಳುತ್ತಿತ್ತು. ಆದರೆ ಈ ವರ್ಷ ಮಳೆ ಬಗ್ಗೆ ಯಾವುದೇ ಭವಿಷ್ಯವಾಣಿ ಹೇಳದಿರೋದು ರೈತ ಸಮುದಾಯದಲ್ಲಿ ಬೇಸರ ಹಾಗೂ ಆತಂಕ ಹುಟ್ಟಿಸಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್