ಮಗನನ್ನು ಹೀರೋ ಆಗಿ ನೋಡೋದು ಸ್ಪಂದನಾ ಕನಸಾಗಿತ್ತು- ನಿರ್ದೇಶಕ ಮಹೇಶ್

Public TV
2 Min Read

ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ಎಲ್ಲಾ ಪೋಷಕರಂತೆಯೇ ತನ್ನ ಮಗನ ಮೇಲೆ ಸಾವಿರಾರು ಕನಸನ್ನು ಕಟ್ಟಿಕೊಂಡಿದ್ದರು. ವಿಜಯ ಅವರಂತೆಯೇ ಮಗ ಶೌರ್ಯ ಹೀರೋ ಆಗಬೇಕು ಎಂಬುದು ಸ್ಪಂದನಾ ಕನಸಾಗಿತ್ತು ಎಂದು  ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ

ನಿರ್ದೇಶಕ ಮಹೇಶ್ ಈ ಬಗ್ಗೆ ಮಾತನಾಡಿದ್ದು, ಸ್ಪಂದನಾಗೆ ತಮ್ಮ ಮಗನನ್ನ ಹೀರೋ ಮಾಡಬೇಕು ಅನ್ನೋ ದೊಡ್ಡ ಕನಸಿತ್ತು. ಮಗನ ಮೊದಲ ಸಿನಿಮಾವನ್ನ ವಿಜಯ ರಾಘವೇಂದ್ರ ಅವರೇ ಡೈರೆಕ್ಷನ್ ಮಾಡುವ ಯೋಚನೆಯಿತ್ತು. ಶ್ರೀಮುರಳಿ ಮತ್ತು ವಿಜಯ್ ಪುತ್ರರನ್ನು ಅವರ ವಿದ್ಯಾಭ್ಯಾಸದ ನಂತರ ಮುಂದಿನ ವರ್ಷಗಳಲ್ಲಿ ನಾಯಕ ನಟನಾಗಿ ಪರಿಚಯಿಸೋ ಆಸೆ ಸ್ಪಂದನಾದಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ:ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

ಸ್ಪಂದನಾ ಸಾವು ಸಹಿಸಿಕೊಳ್ಳುವ ಶಕ್ತಿ ಶ್ರೀಮುರಳಿ ಅವರಿಗಿಲ್ಲ. ನನ್ನ ಕುಟುಂಬಕ್ಕೆ ಯಾಕೆ ಪದೇ ಪದೇ ಹೀಗೆ ಆಗುತ್ತಿದೆ. ನಾನು ಎಂದಿಗೂ ಯಾರಿಗೂ ದ್ರೋಹ ಮಾಡಿಲ್ಲ. ದೇವರು ಯಾಕೆ ಪದೇ ಪದೇ ನೋವು ಕೊಡ್ತಾ ಇದ್ದಾನೆ ಅಂತಾ ಮುರಳಿ ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಯನ್ನು ಅವ್ರು ಅರಗಿಸಿಕೊಂಡಿಲ್ಲ. ಅಷ್ಟರಲ್ಲಿ ಸೂರಜ್‌ಗೆ ಆಕ್ಸಿಡೆಂಟ್ ಆಗಿ ಕಾಲು ಕಟ್ ಆಗಿತ್ತು. ಸೂರಜ್‌ಗೆ ನೆರವಾಗಬೇಕು ಅಂತೆಲ್ಲ ಶ್ರೀಮುರಳಿ- ವಿಜಯ್ ಪ್ಲ್ಯಾನ್ ಹಾಕಿಕೊಂಡಿದ್ರು. ಅಷ್ಟರಲ್ಲಿ  ಸ್ಪಂದನಾ ಅವರಿಗೆ ಈಗಾಗಿದೆ. ನಿಜವಾಗ್ಲೂ ಇದನ್ನು ತಡೆದುಕೊಳ್ಳುವ ಶಕ್ತಿ ಮುರಳಿಗೂ ಇಲ್ಲ ವಿಜಯ್‌ಗೂ ಇಲ್ಲಾ ಎಂದು ಮಹೇಶ್ ಮಾತನಾಡಿದ್ದಾರೆ.

ಚಿನ್ನೇಗೌಡ್ರನ್ನು ತಂದೆಯಂತೆ ಪ್ರೀತಿಯಿಂದ ಕಾಣುತ್ತಿದ್ದರು ಸ್ಪಂದನಾ. ಮನೆಯಲ್ಲಿದ್ದಾಗ ಅವರೇ ಮಾವನಿಗೆ ಊಟ ಬಡಿಸುತ್ತಿದ್ರು. ತುಂಬಾ ಒಳ್ಳೆಯ ಬಾಂದವ್ಯ ಇತ್ತು. ಚಿನ್ನೇಗೌಡ್ರಿಗೆ ಈ ನೋವು ಸಹಿಸೋ ಶಕ್ತಿ ಇರಲ್ಲ. ಸೊಸೆ ಮನೆ ಮಗಳಂತೆ ಕಾಣುತ್ತಿದ್ದರು. ಸ್ಪಂದನಾ ಅತ್ತಿಗೆ ಮನೆಗೆ ಬಂದಾಗೆಲ್ಲ ಮುರಳಿ ರೇಗಿಸುತ್ತಿದ್ದರು. ಈಗ ಎಲ್ಲರನ್ನು ಶಾಪಿಂಗ್‌ಗೆ ಕರೆಕೊಂಡು ಅಂಗಡಿಗಳನ್ನು ಮನೆಬಾಗಿಲಿಗೆ ತೆಗೆದುಕೊಂಡು ಬರುತ್ತಾರೆ ಅಂತಾ ರೇಗಿಸುತ್ತಿದ್ದರು. ಸ್ಪಂದನಾ ಮನೆಗೆ ಬಂದಾಗಲೆಲ್ಲ ಮುರುಳಿ ಮಕ್ಕಳ ಜೊತೆಗೂಡಿ ಶಾಪಿಂಗ್‌ಗೆ ಹೋಗುತ್ತಿದ್ರು. ಮಕ್ಕಳಿಗೆ ಬಟ್ಟೆ, ಫುಡ್ ಕೊಡಿಸೋದು ಅವರಿಗೆ ಇಷ್ಟ. ಅವರ ಚಂದದ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ ಎಂದು ಎಸ್. ಮಹೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್