ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ

Public TV
1 Min Read

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ (Vijay Thalapathy) ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡುವ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಕೂಡ ವಿಜಯ್ ಮುಗಿಸಿ ಕೊಡ್ತಿದ್ದಾರೆ. ಸದ್ಯ ವಿಜಯ್ ನಟನೆಯ ಕೊನೆಯ ಚಿತ್ರದ ನಾಯಕಿ, ಪ್ರಾಜೆಕ್ಟ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

‘ಲಿಯೋ’ (Leo) ಚಿತ್ರದ ನಂತರ ವಿಜಯ್ 68ನೇ ಚಿತ್ರಕ್ಕೆ ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ವಿಜಯ್ ಸಕ್ರಿಯರಾಗಿದ್ದಾರೆ. ಈ ಬೆನ್ನಲ್ಲೇ ವಿಜಯ್ ನಟನೆಯ ಕೊನೆಯ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. 69ನೇ ಸಿನಿಮಾ ವಿಜಯ್ ನಟಿಸಲಿರುವ ಕೊನೆಯ ಪ್ರಾಜೆಕ್ಟ್ ಎನ್ನಲಾಗುತ್ತಿದೆ. ಇದನ್ನೂ ಓದಿ:ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

ವಿಜಯ್ ಕೊನೆ ಸಿನಿಮಾಗೆ ‘ಜವಾನ್’ (Jawan) ಸ್ಟಾರ್ ಡೈರೆಕ್ಟರ್ ಅಟ್ಲೀ (Atlee Kumar) ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಹಿಂದೆ ಇಬ್ಬರ ಕಾಂಬೋದಲ್ಲಿ ಮೆರ್ಸಲ್, ಬಿಗಿಲ್, ಹಾಗೂ ತೇರಿ, ಚಿತ್ರಗಳು ಮೂಡಿ ಬಂದಿತ್ತು. ಈಗ ಮತ್ತೆ ಈ ಜೋಡಿ ಒಂದಾಗಲು ನಿರ್ಧರಿಸಿದ್ದಾರಂತೆ.

ವಿಜಯ್ 69ನೇ ಚಿತ್ರಕ್ಕೆ ಸಮಂತಾ (Samantha) ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣದ ಹೊಣೆ ಹೊತ್ತಿದೆ. ಈ ಸುದ್ದಿ ನಿಜನಾ? ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.

ಈ ಹಿಂದೆ ಕೂಡ ವಿಜಯ್-ಸಮಂತಾ ಕಾಂಬೋದಲ್ಲಿ ಮೆರ್ಸಲ್, ತೇರಿ ಸಿನಿಮಾ ಮೂಡಿ ಬಂದಿತ್ತು. ಇಬ್ಬರ ಕೆಮಿಸ್ಟ್ರಿ ಚಿತ್ರದಲ್ಲಿ ಮೋಡಿ ಮಾಡಿತ್ತು. ಸಿನಿಮಾಗಾಗಿ ಈಗ ಮತ್ತೆ ಈ ಜೋಡಿ ಒಂದಾಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Share This Article