ಸಮಂತಾ ಜೊತೆಗಿನ ಬೆಡ್ ರೂಮ್ ಸೀನ್ ಹಂಚಿಕೊಂಡ ವಿಜಯ್: ಏನಾಗಿದೆ ನಟನಿಗೆ ಎಂದ ಫ್ಯಾನ್ಸ್

By
1 Min Read

ಲ್ಲದ ಕಾರಣಕ್ಕಾಗಿ ವಿಜಯ್ ದೇವರಕೊಂಡ (Vijay Devarakonda) ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ನಟಿ ಸಮಂತಾ ಜೊತೆಗಿನ ಫೋಟೋ, ವಿಡಿಯೋ ಹಂಚಿಕೊಳ್ಳುವ ಮೂಲಕ ಏನೇನೋ ಹೇಳಲು ಅವರು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ (Samantha) ಜೊತೆ ತಾವು ತೀರಾ ಕ್ಲೋಸ್ ಆಗಿದ್ದೇನೆ ಎಂದು ಹೇಳಿಕೊಳ್ಳಲು ಸಿನಿಮಾದ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಇದು ನೆಟ್ಟಿಗರನ್ನು ಕೆರಳಿಸುವಂತೆ ಮಾಡಿದೆ.

ಈಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಮಂತಾ ಜೊತೆ ಬೆಡ್ ರೂಮ್ ನಲ್ಲಿರುವ (Bedroom Video) ದೃಶ್ಯ ಅದಾಗಿದೆ. ಆ ವಿಡಿಯೋ ಶೇರ್ ಮಾಡುವುದರ ಜೊತೆಗೆ ‘ನನ್ನ ಬಯಸುವಂತಹ ಪ್ರೀತಿ’ ಎಂದು ಬರೆದುಕೊಂಡಿದ್ದಾರೆ. ಈ ಬರಹವೇ ನಾನಾ ಚರ್ಚೆಗೆ ಕಾರಣವಾಗಿದೆ. ಅದು ಖುಷಿ (Khushi) ಸಿನಿಮಾದ ವಿಡಿಯೋ ಆಗಿದ್ದು, ಗಂಡ ಹೆಂಡತಿಯ  ಅನ್ಯೋನ್ಯತೆಯನ್ನು ಅದು ಹೊಂದಿದೆ. ಇದನ್ನೂ ಓದಿ:ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್

ಒಂದು ಕಡೆ ಸಮಂತಾ ಜೊತೆಗಿನ ಫೋಟೋ ಮತ್ತು ವಿಡಿಯೋಗಳನ್ನು ವಿಜಯ್ ದೇವರಕೊಂಡ ಹಂಚಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಸಮಂತಾ ಧ್ಯಾನ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಅವರು ಚಿಕಿತ್ಸೆ ಪಡೆಯಲು ಅಮೆರಿಕಾಗೆ ಹಾರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ ಅವರು ಅನೇಕ ದೇವಸ್ಥಾನಗಳಿಗೆ ಬೇಡಿ ನೀಡಿ ದರ್ಶನ ಪಡೆಯುತ್ತಿದ್ದಾರೆ.

 

ಅಲ್ಲದೇ, ಮನಶಾಂತಿಗಾಗಿ ಅವರು ಸದ್ಗುರು ಆಶ್ರಮವನ್ನೂ ಸೇರಿಕೊಂಡಿದ್ದು, ಆಶ್ರಮದಲ್ಲಿ ಧ್ಯಾನ ಮಾಡುತ್ತಿರುವ ಫೋಟೋವನ್ನು ಸಮಂತಾ ಶೇರ್ ಮಾಡಿದ್ದಾರೆ. ಚಿಕಿತ್ಸೆಗೂ ಮುನ್ನ ಅವರು ಮನಸ್ಸನ್ನು ನಿಗ್ರಹಿಸುವ ಧ್ಯಾನಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್