ವಿಜಯ್ ಸೇತುಪತಿ (Vijay Sethupathi) ಹಾಗೂ ನಿತ್ಯಾ ಮೆನನ್ ಅಭಿನಯದ ತಲೈವಾನ್ ತಲೈವಿ (Thalaivan Thalaivi) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಪ್ರತಿಯೊಬ್ಬರಿಗೂ ಅತೀಬೇಗ ಕನೆಕ್ಟ್ ಆಗುವ ರೀತಿಯಲ್ಲಿ ಮೂಡಿಬಂದಿದೆ.
ಒಬ್ಬ ಮಿಡಲ್‌ಕ್ಲಾಸ್ ಹುಡುಗ ಪುಟ್ಟ ವ್ಯಾಪಾರದಿಂದ ಸಂಸಾರ ಸಾಗಿಸುವ ಹಾದಿಯಲ್ಲಿ ಯಾವೆಲ್ಲ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಆ ಸಮಸ್ಯೆಗಳ ಸರಮಾಲೆಯನ್ನ ಎದುರಿಸಲಾಗದೇ ಮನೆಯನ್ನೂ ತೊರೆಯುವಂತ ಸಂದರ್ಭಗಳು ಕೂಡಾ ಎದುರಾಗುವ ಹಾಗೆ ಕಾಣುತ್ತೆ. ಒಂದು ಕಡೆ ಸಮಸ್ಯೆಗಳಿದ್ದರೂ ಟ್ರೈಲರ್ ಮಾತ್ರ ನೋಡುಗರ ಮನ ಮುಟ್ಟುತ್ತಿದೆ. ಇದನ್ನೂ ಓದಿ: ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್ ಪ್ರಭಾಕರ್
ಸಿನಿಮಾದಿಂದ ಸಿನಿಮಾಗೆ ಭಿನ್ನ ವಿಭಿನ್ನ ಪಾತ್ರಗಳನ್ನ ಮಾಡುವ ವಿಜಯ್ ಸೇತುಪತಿ ಇಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ಸೇತುಪತಿಗೆ ನಾಯಕಿಯಾಗಿ ನಿತ್ಯಾ ಮೆನನ್ (Nithya Menen) ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ನಿತ್ಯಾ ಮೆನನ್ ಬಿಟ್ರೆ ಬೇರೆ ಯಾರೂ ಸೂಟ್ ಆಗ್ತಿರಲಿಲ್ಲವೇನು ಎನ್ನುವ ಹಾಗೆ ಅಭಿನಯಿಸಿದ್ದಾರೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!
ಈ ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಪಂಡಿರಾಜು. ಅಂದಹಾಗೆ ಸಿನಿಮಾಗೆ ಸತ್ಯಜ್ಯೋತಿ ಫಿಲಂಸ್ ಹಾಗೂ ತ್ಯಾಗರಾಜನ್ ಪ್ರೆಸೆಂಟ್ಸ್ ಬ್ಯಾನರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದೆ. ಟ್ರೈಲರ್‌ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.