ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

Public TV
1 Min Read

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ವಿಜಯ್ ಸೇತುಪತಿ ಅವರೊಂದಿಗೆ ಹೊಸ ಸಿನಿಮಾದಲ್ಲಿ ನಟಿಸಲು ಸೈ ಎಂದಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

‘ನಿಶ್ಯಬ್ದಂ’ ಸಿನಿಮಾದ ನಂತರ ಸಖತ್ ಚ್ಯೂಸಿಯಾಗಿರುವ ಸ್ವೀಟಿ ತಮ್ಮ ಮುಂದಿನ ಪ್ರಾಜೆಕ್ಟ್ ಗಾಗಿ ಸಖತ್ ವರ್ಕ್ ಮಾಡುತ್ತಿದ್ದಾರೆ. ಇನ್ನೂ ಪ್ಯಾನ್ ಇಂಡಿಯಾದಲ್ಲಿ ವಿಜಯ್ ಸೇತುಪತಿ ಮತ್ತು ಅನುಷ್ಕಾ ಶೆಟ್ಟಿ ಕಳೆದ ದಶಕಗಳಿದ್ದ ಆಕರ್ಷಣೆಯನ್ನು ಹೊಂದಿದವರು. ಇಬ್ಬರು ಸೂಪರ್ ಸ್ಟಾರ್ ಆಗಿದ್ದು, ಒಟ್ಟಿಗೆ ಇಬ್ಬರನ್ನು ತೆರೆಯ ಮೇಲೆ ನೋಡಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಣ್ಣ-ತಮ್ಮಂದಿರೂ ಎಲ್ಲರೂ ಒಂದೇ ಎಂಬ ಮನಸ್ಥಿತಿಯಿಂದ ಹೊರಗೆ ಬನ್ನಿ: ಸತೀಶ್ ಜಾರಕಿಹೊಳಿ

2020ರಲ್ಲಿ ವೆಲ್ಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿದ್ದ ಹೊಸ ಚಿತ್ರಕ್ಕೆ ವಿಜಯ್ ಸೇತುಪತಿ ಮತ್ತು ಅನುಷ್ಕಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೆ ಇಬ್ಬರು ಅದನ್ನು ಸುಳ್ಳು ಎಂದು ಸ್ಪಷ್ಟನೆಯನ್ನು ನೀಡಿದ್ದರು. ಈಗ ಮತ್ತೆ ಈ ಸುದ್ದಿ ಕೇಳಿ ಬರುತ್ತಿದ್ದು, ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದಾರೆ. ಎ.ಎಲ್.ವಿಜಯ್ ಅವರು ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ ಜೀವನಚರಿತ್ರೆಯನ್ನು ಆಧಾರಿಸಿ ‘ತಲೈವಿ’ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ಅಭಿನಯಿಸಿದ್ದರು.

ವಿಜಯ್-ಅನುಷ್ಕಾ ಅಭಿನಯದ ಈ ಸಿನಿಮಾವನ್ನು ಜನವರಿಯಲ್ಲಿ ಚಿತ್ರೀಕರಿಸಲು ವಿಜಯ್ ಯೋಜನೆಯನ್ನು ಮಾಡಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಜನರಿಗೆ ಓಮಿಕ್ರಾನ್- 21ಕ್ಕೆ ಏರಿದ ಕೇಸ್ 

ಈ ಹಿಂದೆ ಅನುಷ್ಕಾ ಅವರು ಎ.ಎಲ್.ವಿಜಯ್ ಅವರೊಂದಿಗೆ ‘ತಾಂಡವಂ’ ಮತ್ತು ‘ದೈವ ತಿರುಮಗಳು’ ಎಂಬ ಎರಡು ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಮಾಡಿದರೆ ಇವರಿಬ್ಬರ ಮೂರನೇ ಸಿನಿಮಾವಾಗುತ್ತದೆ. ಸೇತುಪತಿ ಮತ್ತು ಅನುಷ್ಕಾ ಇದೇ ಮೊದಲು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಅಧಿಕೃತ ಸುದ್ದಿಗಾಗಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *