ವಿಜಯ್ ಪತ್ನಿ ಮರಣೋತ್ತರ ಪರೀಕ್ಷೆ ಮುಕ್ತಾಯ, ಬೆಂಗಳೂರಿಗೆ ಯಾವಾಗ?

Public TV
1 Min Read

ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಬಾರದ ಲೋಕಕ್ಕೆ ತೆರಳಿದ್ದಾರೆ. ಥೈಲ್ಯಾಂಡ್ ಪ್ರವಾಸದಲ್ಲಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಸಾವನಪ್ಪಿದ್ದಾರೆ. ಈಗಾಗಲೇ ಥೈಲ್ಯಾಂಡ್‌ನಲ್ಲೇ ಸ್ಪಂದನಾ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಇಂದು ತಡರಾತ್ರಿ ಮೃತದೇಹ ಬೆಂಗಳೂರಿಗೆ ರವಾನೆ ಆಗಲಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

ವಿಜಯ್ ಪತ್ನಿ ಹೃದಯಘಾತವಾದಾಗ ಅವರನ್ನು ಬ್ಯಾಂಕಾಕ್‌ನ ಕಿಂಗ್ ಚುಲಾಲಾಂಗ್‌ಕಾರ್ನ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಇಂದು (ಆಗಸ್ಟ್ 08) ಮಧ್ಯಾಹ್ನದ ವೇಳೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಸ್ಪಂದನಾ ಮೃತದೇಹ ಹಸ್ತಾಂತರವಾಗಲಿದೆ. ಇಂದು ತಡ ರಾತ್ರಿ 1 ಗಂಟೆಗೆ ಸ್ಪಂದನಾ ಮೃತದೇಹ ಬೆಂಗಳೂರಿನ (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತಿಳಿದುಬಂದಿದೆ.

ಮನೆಯ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆಗಸ್ಟ್ 9ರ ಮಧ್ಯಾಹ್ನದವರೆಗೂ ಅಂತಿಮ ದರ್ಶನದ ವ್ಯವಸ್ಥೆ ಇರಲಿದೆ. ನಂತರ ಹರಿಶ್ಚಂದ್ರ ಘಾಟ್‌ನಲ್ಲಿ ಈಡಿಗ ಪದ್ಧತಿಯಂತೆ ಅಂತ್ಯ ಸಂಸ್ಥಾರ ನೆರವೇರಲಿದೆ.

‘ನಿನಗಾಗಿ’ ಸಿನಿಮಾ ಮಾಡುವಾಗ ಮಂಗಳೂರಿನ ಹುಡುಗಿಯೇ ಬೇಕು ಎಂದು ವಿಜಯ್‌ಗೆ ಅನಿಸಿತ್ತು. ಅದರಂತೆಯೇ ಬೆಳ್ತಂಗಡಿಯ ಹುಡುಗಿ ಸ್ಪಂದನಾ ಅವರನ್ನ ನೋಡಿ ವಿಜಯ್ ಬೋಲ್ಡ್ ಆಗಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಎರಡು ಕುಟುಂಬದ ಒಪ್ಪಿಗೆ ಪಡೆದು 2007ರಲ್ಲಿ ವೈವಾಹಿಕ ಜೀವನಕ್ಕೆ ವಿಜಯ್- ಸ್ಪಂದನಾ ಕಾಲಿಟ್ಟಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್