ಕಣ್ಣೀರು ಹಾಕಬಾರದು ಅಂತ ನಿರ್ಧಾರ ಮಾಡ್ಕೊಂಡು ಬಂದಿದ್ದೀನಿ: ರಾಘು ಭಾವುಕ

Public TV
2 Min Read

ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ (Vijay Raghavendra) ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ `ಕದ್ದ ಚಿತ್ರ’ (Kaddha Chitra) ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ.

ಇದೇ ಆಗಸ್ಟ್ 26ಕ್ಕೆ ತೆರೆ ಕಾಣಬೇಕಿದ್ದ ಸಿನಿಮಾ (Cinema) ಸ್ಪಂದನಾ ನಿಧನದಿಂದ ಮುಂದೂಡಲಾಗಿತ್ತು. ಇಂದು ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ (Spandana) ಅವರ 16ನೇ ವಿವಾಹ ವಾರ್ಷಿಕೋತ್ಸವದ ನೆನಪಿನೊಂದಿಗೆ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ್ದು, ನಟ ವಿಜಯ್ ರಾಘವೇಂದ್ರ ಈ ಸಿನಿಮಾವನ್ನ ಪತ್ನಿ ಸ್ಪಂದನಾಗೆ ಅರ್ಪಿಸಿದ್ದಾರೆ. ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

ಬಳಿಕ `ಕದ್ದ ಚಿತ್ರ’ ಚಿತ್ರದ ಕುರಿತು ಮಾತನಾಡಿದ ವಿಜಯ್ ರಾಘವೇಂದ್ರ, ಇದು ಬರೀ ತಂಡ ಅಲ್ಲ, ಸ್ನೇಹಿತರ ಬಳಗ, ವಿಶ್ವಾಸದ ಕನಸು ಇದು. ಮೊದಲು ಹಿಂಜರಿದಿದ್ದೆ, ನಂಬಿಕೆ ಮೇಲೆ ಕೆಲಸ ಮಾಡ್ತೀನಿ ಅಂದಿದ್ದೆ. ಒಳ್ಳೆಯ ತಂಡ ಬಂದಾಗ ಹೊರೆ ಆಗ್ತಿನೇನೋ ಅನಿಸುತ್ತೆ. ಇಂದು ಟ್ರೈಲರ್‌ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಮಾತನಾಡೋಕೆ ಸಾಕಷ್ಟು ವಿಷಯಗಳು ಇರುತ್ವೆ. ಆಗ ಮಾತಾಡೋಕೆ ಕಾಯ್ತಾ ಇರ್ತಿನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್: ರಾಷ್ಟ್ರ ಪ್ರಶಸ್ತಿ ಬಗ್ಗೆ ಅಸಮಾಧಾನ ಹೊರ ಹಾಕಿದ ಅನುಪಮ್ ಖೇರ್

ಮಾತಾಡುವ ಕಥೆ ನಾವೇ ಆದಾಗ ನೀವೆಲ್ಲಾ ಜೊತೆಗೆ ನಿಂತ್ರಿ, ತಾಯಿ ಸ್ಥಾನದಲ್ಲಿ ನಿಂತಿದ್ರಿ, ಯಾರೂ ಹೊರಗಿನವರ ರೀತಿ ಇರಲಿಲ್ಲ ಮನೆಯವರ ರೀತಿ ಇದ್ರಿ. ಕಣ್ಣೀರು ಹಾಕಬಾರದು ಅಂತಾ ನಿರ್ಧಾರ ಮಾಡ್ಕೊಂಡು ಬಂದಿದ್ದೀನಿ. ಅದು ಅವಳಿಗೂ ಇಷ್ಟ ಆಗ್ತಿರಲಿಲ್ಲ. ನಿಮ್ಮ ಕುಟುಂಬದಲ್ಲಿ ನನ್ನನ್ನೂ ಒಬ್ಬನನ್ನಾಗಿಸಿಕೊಂಡಿದ್ದೀರಿ. ಪ್ರಮೋಷನ್‌ಗೆ ನಿಲ್ಲೋದು ನನ್ನ ಕರ್ತವ್ಯ ನೀವೆಲ್ಲಾ ನನ್ನ ಜೊತೆ ಇರ್ತೀರಾ ಅಂದ್ಕೊಂಡಿದ್ದೀನಿ. ನನ್ನ ಹಾಗೂ ನನ್ನ ಮಗನನ್ನ ಕೈ ಹಿಡಿದು ನಡೆಸ್ತೀರಿ ಅಂದ್ಕೊಂಡಿದ್ದೀನಿ. ಈ ಸಿನಿಮಾದ ಗೀತೆಗಳು ತುಂಬಾ ಚೆನ್ನಾಗಿವೆ. ಮ್ಯೂಸಿಕ್ ಡೈರೆಕ್ಟರ್ ಒಳ್ಳೆಯ ಸಾಂಗ್ ಕೊಟ್ಟಿದ್ದಾರೆ ಎಂದು ನಟ ಭಾವುಕರಾದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್