ಸಿನಿಲೋಕದ ಸೆನ್ಸೇಷನಲ್ ಜೋಡಿ ವಿಜಯ್ ದೇವರಕೊಂಡ(Vijay Deverakonda) ಹಾಗೂ ರಶ್ಮಿಕಾ (Rashmika) ಜೊತೆಯಾಗಿ ವಿದೇಶ ಪ್ರಯಾಣ ಮಾಡಿದ್ದಾರೆ. ಇಬ್ಬರೂ ಒಂದೇ ದಿನ ಒಂದೇ ಸಮಯಕ್ಕೆ ಹೈದರಾಬಾದ್‌ನಲ್ಲಿ (Hyderabad) ಕಾಣಿಸಿಕೊಂಡಿದ್ದು ಹೊಸ ವರ್ಷದ ಆಚರಣೆಗೆ ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ.
ಮದುವೆಗೂ ಮುನ್ನ ಈ ಜೋಡಿ ಬ್ಯಾಚುಲರ್ ಜೀವನದ ಕೊನೆಯ ನ್ಯೂಇಯರ್ ಸೆಲೆಬ್ರೇಷನ್ ಎಂಜಾಯ್ ಮಾಡಲು ವಿದೇಶಕ್ಕೆ ಹೋಗಿರುವ ಸಾಧ್ಯತೆಯಿದೆ. ಹಿಂದೆ ಅನೇಕ ಬಾರಿ ಒಟ್ಟಿಗೆ ಪ್ರಯಾಣ ಮಾಡಿರುವ ರಶ್ಮಿಕಾ, ವಿಜಯ್ ಈಗಲೂ ಜಂಟಿಯಾಗಿ ಜಾಲಿ ಟ್ರಿಪ್ ಮಾಡಿದ್ದಾರೆ. ಇದನ್ನೂ ಓದಿ: ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

