ಸಿನಿ ಜರ್ನಿಯ ಆರಂಭದಲ್ಲೇ ರಾಕ್‍ಲೈನ್ ವೆಂಕಟೇಶ್ ಸಹಾಯ ಮಾಡಿದ್ರು: ವಿಜಯ್ ದೇವರಕೊಂಡ

Public TV
1 Min Read

ಬೆಂಗಳೂರು: ತನ್ನ ಸಿನಿಮಾ ಜರ್ನಿಯ ಆರಂಭದಲ್ಲಿಯೇ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್ ಅವರು ತನಗೆ ಆರ್ಥಿಕ ಸಹಾಯ ಮಾಡಿದ್ದ ಕುರಿತ ಸಂಗತಿಯನ್ನು ಟಾಲಿವುಡ್ ನಟ ವಿಜಯ್ ದೇವರಕೊಂಡ ರಿವೀಲ್ ಮಾಡಿದ್ದಾರೆ.

ತಮ್ಮ ಮುಂದಿನ ನೋಟಾ ಸಿನಿಮಾ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ ವಿಜಯ್ ತಮ್ಮ ಜೀವನದಲ್ಲಿ ಬೆಂಗಳೂರಿನಲ್ಲಿ ಕಳೆದ ಸಮಯದ ಕ್ಷಣಗಳನ್ನು ತೆರೆದಿಟ್ಟರು. ಈ ವೇಳೆ ತಮ್ಮ ಸಿನಿ ಜರ್ನಿಯ ಆರಂಭದಲ್ಲಿ ಮೊದಲ ಮನೆ ಖರೀದಿ ಮಾಡಲು ಮುಂದಾಗಿದ್ದೆ. ಇದೇ ಸಮಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಅವರು ಒಂದು ದೊಡ್ಡ ಮೊತ್ತವನ್ನು ಪಾವತಿಸಿದ್ದರು. ಇದು ತನಗೆ ತುಂಬಾ ಸಹಾಯವಾಯಿತು ಎಂದು ತಿಳಿಸಿದ್ದಾರೆ.

ನನ್ನ `ಪೆಳ್ಳಿ ಚೂಪುಲು’ ಎಂಬ ಸಿನಿಮಾ ಆಗತಾನೇ ಸಿದ್ಧವಾಗುತ್ತಿತ್ತು. ಆ ವೇಳೆಯೇ ಅವರು ನನಗೆ ಅವಕಾಶ ನೀಡಿದರು. ಅದ್ದರಿಂದ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಕಳೆದ ಹಲವು ದಿನಗಳಿಂದ ಸಿನಿಮಾ ಸ್ಕ್ರಿಪ್ಟ್ ಕಳಿಸಿದ್ದೆ. ಆದರೆ ಯಾವುದು ಇಷ್ಟವಾಗಿರಲಿಲ್ಲ. ಆದರೆ ಸದ್ಯ ಒಂದು ಕಥೆ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ನನ್ನ ಅವರ ಕಂಬಿನೇಷನ್ ಸಿನಿಮಾ ಮೂಡಿ ಬರಲಿದೆ ಎಂದು ತಿಳಿಸಿದರು. ಇದೇ ವೇಳೆ ತಾನು ಕನ್ನಡಿದಲ್ಲಿ ಕೂಡ ನಟನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.  ಇದನ್ನು ಓದಿ: ರಶ್ಮಿಕಾ, ರಕ್ಷಿತ್ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ಮಾಪಕ ಜ್ಞಾನವೇಲು ರಾಜು ಅವರು ಭಾಗವಹಿಸಿದ್ದರು. ನೋಟಾ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಇದನ್ನು ಓದಿ: ನಮ್ಮ ಬೆಂಗಳೂರು ಉಳಿಸುವುದು ನಮ್ಮ ಕರ್ತವ್ಯ: ವಿಜಯ್ ದೇವರಕೊಂಡ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *