ವಿಜಯ್, ಸಮಂತಾ ನಟನೆಯ ‘ಖುಷಿ’ ಸಿನಿಮಾ ಎಂಟ್ರಿಗೆ ದಿನಗಣನೆ- ಸೆ.1ಕ್ಕೆ ಚಿತ್ರ ರಿಲೀಸ್

Public TV
1 Min Read

ಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Devarakonda) ನಟನೆಯ ಖುಷಿ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸೆ. 1ಕ್ಕೆ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್, ಹಾಡುಗಳಿಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

‘ಖುಷಿ’ (Kushi Film) ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ರಿಲೀಸ್ ಆಗಲಿದೆ. ಮೈತ್ರಿ ಮೂವಿ ಬ್ಯಾನರ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಸಮಂತಾ- ನಾಗಚೈತನ್ಯ ನಟಿಸಿದ್ದ ‘ಮಜಿಲಿ’ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ‘ಖುಷಿ’ ಸಿನಿಮಾದಲ್ಲಿ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೇಷಾಂ ಅಬ್ದುಲ್ ವಹಾಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ. ಸಾಲು ಸಾಲು ಸೋಲು ಕಂಡಿರುವ ವಿಜಯ್ ದೇವರಕೊಂಡಗೆ ‘ಖುಷಿ’ ಸಕ್ಸಸ್ ಕೊಡಲಿದೆ ಎಂಬ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ವಿಜಯ್ ದೇವರಕೊಂಡ, ಸಮಂತಾರನ್ನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿವೀಲ್ ಆಗಿರುವ ಝಲಕ್‌ನಿಂದ ಈ ಜೋಡಿ ಮೋಡಿ ಮಾಡಿದೆ. ಖುಷಿ ಜೋಡಿ ಅದೆಷ್ಟರ ಮಟ್ಟಿಗೆ ಕ್ಲಿಕ್ ಆಗುತ್ತೆ ಸೆ.1ರಂದು ತಿಳಿಯಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್