ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

Public TV
1 Min Read

ಟಾಲಿವುಡ್‌ನಲ್ಲಿ (Tollywood) ಸದ್ಯ ಗಮನ ಸೆಳೆಯುತ್ತಿರುವ ಸಿನಿಮಾ ಅಂದರೆ ಆನಂದ್ ದೇವರಕೊಂಡ(Anand Devarakonda) ನಟನೆಯ ‘ಬೇಬಿ’ ಸಿನಿಮಾ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್, ಸಹೋದರ ಆನಂದ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿರುವ ವಿಜಯ್ ದೇವರಕೊಂಡಗೆ (Vijay Devarakonda) ಶಾಕ್ ಆಗಿದೆ. ಅಭಿಮಾನಿಯ ವರ್ತನೆ ನೋಡಿ ಆತಂಕಗೊಂಡಿದ್ದಾರೆ.

ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ, ವಿರಾಜ್ ಅಶ್ವೀನ್ ನಟನೆಯ ‘ಬೇಬಿ’ (Baby Film) ಸಿನಿಮಾ ಜುಲೈ 14ಕ್ಕೆ ತೆರೆ ಕಂಡಿತ್ತು. ಪ್ರೀತಿಯಲ್ಲಿನ ಎಮೋಷನ್ಸ್, ಬ್ರೇಕಪ್ ಕಥೆಯನ್ನ ನಿರ್ದೇಶಕರು ಅದ್ಬುತವಾಗಿ ತೋರಿಸಿದ್ದಾರೆ. ಈಗಿನ ಜನರೇಷನ್‌ಗೆ ಕನೆಕ್ಟ್ ಆಗುವ ಹಾಗಿದೆ ಈ ಕಥೆ. ಹಾಗಾಗಿ ಬೇಬಿ ಸಿನಿಮಾ ಸದ್ಯ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದನ್ನೂ ಓದಿ:ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗರಾಜನ್ ಕಂಠದಲ್ಲಿ ‘ಸಂಜು’ ಸಾಂಗ್

ತಮ್ಮ ಆನಂದ್ ದೇವರಕೊಂಡ (Anand Devarakonda) ಸಿನಿಮಾ ಸಕ್ಸಸ್ ಮೀಟ್‌ಗೆ ವಿಜಯ್ ದೇವರಕೊಂಡ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನಟ ಹಂಚಿಕೊಳ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಹತ್ತಿ ಅವರ ಪಾದ ಮುಟ್ಟಲು ಯತ್ನಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯ್ ವೇದಿಕೆ ಮೇಲೆ ಮಾತನಾಡುತ್ತಿದ್ದಾಗ, ಅಭಿಮಾನಿಯೊಬ್ಬ ಓಡುತ್ತಲೇ ವೇದಿಕೆ ಏರಿದ್ದಾರೆ. ಸಡನ್ ಬಂದಿರೋ ರೀತಿ ವಿಜಯ್ ಶಾಕ್ ಆಗಿದ್ದಾರೆ. ಕಾಲು ಮುಟ್ಟಲು ಬಂದ ಅಭಿಮಾನಿಗೆ, ಕಾಲಿಗೆ ಬೀಳದಂತೆ ಪಕ್ಕಕ್ಕೆ ಓಡಿದ್ದಾರೆ. ಅಷ್ಟರಲ್ಲಿ ಅಲ್ಲಿನ ಸಿಬ್ಬಂದಿ ಗಮನ ಹರಿಸಿ, ಆ ಅಭಿಮಾನಿಯನ್ನು (Fan) ಹಿಡಿದುಕೊಂಡು ತೆರಳಿದ್ದಾರೆ.

ಇನ್ನೂ ಈ ಸಿನಿಮಾದ ಪ್ರಿ-ರಿಲೀಸ್ ಈವೆಂಟ್ ಮತ್ತು ಸೆಲೆಬ್ರಿಟಿ ಶೋಗೆ ಸಾಥ್ ನೀಡಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಬೇಬಿ’ ಸಿನಿಮಾ ನೋಡಿ ಭಾವುಕರಾಗಿದ್ದರು. ಸಿನಿಮಾ ಕಂಟೆಂಟ್, ನಟನೆ ನೋಡಿ ಮೆಚ್ಚಿಕೊಂಡಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್