ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದಲ್ಲಿ ‘ವಿಜಯ ದಶಮಿ’ ಧಾರಾವಾಹಿ

Public TV
2 Min Read

ವರೆಗೂ ಸಿನಿಮಾಗಳನ್ನು ತಯಾರಿಸುತ್ತಾ ಬಂದಿರುವ ಪೂರ್ಣಿಮ ಎಂಟರ್ ಪ್ರೈಸಸ್, ಇದೇ ಮೊದಲ ಬಾರಿಗೆ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದೆ. ಈ ಧಾರಾವಾಹಿಗೆ ವಿಜಯ ದಶಮಿ ಎಂದು ಹೆಸರಿಡಲಾಗಿದ್ದು, ಈ ಧಾರಾವಾಹಿಯು ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಜೊತೆ ಜೊತೆಗೆ ಅಮ್ಮನ ಮದುವೆ ಎಂಬ ಮತ್ತೊಂದು ಧಾರಾವಾಹಿಯೂ ಕೂಡ ಆಗಸ್ಟ್ 1 ರಿಂದ ಆರಂಭವಾಗುತ್ತಿರುವುದು ವಿಶೇಷ.

ಆ ಪೈಕಿ “ವಿಜಯ ದಶಮಿ” ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್  ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ದೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ಹತ್ತೊಂಭತ್ತಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ ಎಪ್ಪತ್ತಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ.

ಮೊಟ್ಟಮೊದಲ ಬಾರಿಗೆ ರಾಘವೇಂದ್ರ ರಾಜಕುಮಾರ್ ಅವರು ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಅದ್ದೂರಿ ದೃಶ್ಯ ಕಾವ್ಯ “ವಿಜಯ ದಶಮಿ”ಯ ಚಿತ್ರೀಕರಣ ಭಾರತದಾದ್ಯಂತ ಅದ್ಭುತ ಸ್ಥಳಗಳಲ್ಲಿ ನಡೆಯಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದರೆ, ಕಮರ್ಷಿಯಲ್ ಚಿತ್ರವೊಂದರ ಟ್ರೇಲರ್ ನೋಡಿದ ಅನುಭವವಾಗುತ್ತದೆ. ಅಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಪ್ರೋಮೊ. ಧಾರಾವಾಹಿ ಕೂಡ ಎಲ್ಲರ ಮೆಚ್ಚುಗೆ ಪಡೆಯಲಿದೆ ‌ಎಂಬ ಭರವಸೆ ತಂಡದ್ದು. ಶಶಿ ಈ ಧಾರಾವಾಹಿಯ ನಿರ್ದೇಶಕರು.

ಅಮ್ಮ – ಮಗಳ ವಾತ್ಸಾಲ್ಯದ ” ಅಮ್ಮನ ಮದುವೆ ” ಧಾರಾವಾಹಿ ಸಹ ಇದೇ ಆಗಸ್ಟ್ 1ರ ಸೋಮವಾರದಿಂದ ರಾತ್ರಿ 8 ಕ್ಕೆ ಆರಂಭವಾಗಲಿದೆ. ನ್ಯೂ D2 ಮೀಡಿಯಾ ನಿರ್ಮಾಣ ಮಾಡುತ್ತಿದೆ. ಮದುವೆಯಾಗಿ ಜೀವನರೂಪಿಸಿಕೊಳ್ಳಲು ಹೊರಟ ಮಗಳು ,‌ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ನಡೆಸುವ ಹೋರಾಟದ ಭಾವುಕ ಕಥೆ ಇದಾಗಿದೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

ಈ ಎರಡು ಧಾರಾವಾಹಿಗಳ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಿರಿಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ, ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಅಪಾರ ಸಂಖ್ಯೆಯ ಕಲಾವಿದರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಚೇತನ್ ಕುಮಾರ್, ಸೇತುರಾಮ್,  ಕಿಶೋರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *