ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Public TV
1 Min Read

ಹಾನೊಯ್: ಕೋವಿಡ್-19 ನಿಯಮವನ್ನು ಉಲ್ಲಂಘಿಸಿವುದರ ಜೊತೆಗೆ ಆತನ ಸಂಪರ್ಕದಲ್ಲಿದ್ದವರಿಗೂ ವೈರಸ್ ಹರಡಿಸಿದ ವ್ಯಕ್ತಿಗೆ ವಿಯೆಟ್ನಾಂ ದೇಶದಲ್ಲಿ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೆ ವ್ಯಾನ್ ಟ್ರೈ(28)ರನ್ನು ಸಾರ್ವಜನಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ ಬಳಿಕ, ಕೊರೊನಾ ವೈರಸ್ ಹರಡಿಸಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಲೆ ವ್ಯಾನ್ ಟ್ರೈ ಹೋ ಚಿ ಮಿನ್ಹ್ ನಗರದಿಂದ ಕಾ ಮೌಗೆ ಹಿಂದಿರುಗುವ ಮೂಲಕ 21 ದಿನಗಳ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಮೇಯರ್ ಸ್ಥಾನಕ್ಕೆ 12 ಮಂದಿ ಅರ್ಹರು – ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಸದಸ್ಯರೇ ಇಲ್ಲ

ಇದೇ ರೀತಿಯ ಆರೋಪದಡಿ ದೇಶವು ಮತ್ತಿಬ್ಬರು ವ್ಯಕ್ತಿಗಳಿಗೆ 18 ತಿಂಗಳ ಮತ್ತು 2 ವರ್ಷಗಳ ಅಮಾನತು ಹಾಗೂ ಜೈಲು ಶಿಕ್ಷೆಯನ್ನು ವಿಧಿಸಿದೆ. 2020ರಲ್ಲಿ ಕೋವಿಡ್ ಮೊದಲನೇ ಅಲೆಯ ಹರಡುವಿಕೆಯಿಂದ ಯಶಸ್ವಿಯಾದ ಬಳಿಕ ಇದೀಗ ವಿಯೆಟ್ನಾಂ ದೇಶ ಮತ್ತೆ ಕೋವಿಡ್-19 ಸೋಂಕಿನೊಂದಿಗೆ ಹೋರಾಡುತ್ತಿದೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

ಕೊರೊನಾ ವೈರಸ್ ಮೊದಲ ಅಲೆಯನ್ನು ಗೆದ್ದ ಹಲವು ದೇಶಗಳಲ್ಲಿ ವಿಯೆಟ್ನಾಂ ಕೂಡ ಒಂದಾಗಿದ್ದು, ಸಾಮೂಹಿಕ ಪರೀಕ್ಷೆ, ಕೊರೊನಾ ಸೋಂಕಿತರ ಪತ್ತೆ ಹಚ್ಚುವಿಕೆ, ಗಡಿಯಲ್ಲಿ ಕಠಿಣ ನಿರ್ಬಂಧಗಳು ಮತ್ತು ಕಟ್ಟು ನಿಟ್ಟಾದ ಕ್ವಾರಂಟೈನ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆದರೆ ಏಪ್ರಿಲ್ ಅಂತ್ಯದಲ್ಲಿ ಹೊಸ ಸೋಂಕು ಪತ್ತೆಯಾಗಿದ್ದು, ವಿಯೆಟ್ನಾಂ ದೇಶದಲ್ಲಿ ಇದೀಗ ಮತ್ತೆ ಆತಂಕ ಸೃಷ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *