ದಿಗ್ವಿಜಯ್ ಸಿಂಗ್ ರಾಮನನ್ನು ನೋಡಿದ್ದಾರಾ? ನೀವು ಹೇಳಿದಂತೆ ರಚನೆ ಮಾಡೋಣ: ಕಾಣಿಯೂರು ಶ್ರೀ ತಿರುಗೇಟು

Public TV
1 Min Read

ಉಡುಪಿ: ಅಯೋಧ್ಯಾ ಶ್ರೀರಾಮ ಮಂದಿರದ (Ayodhya Ram Mandir) ಪ್ರತಿಷ್ಠೆಗೆ ತಗಾದೆ ಎತ್ತಿ ಟೀಕಿಸುತ್ತಿರುವ ರಾಜಕಾರಣಿಗಳಿಗೆ ಉಡುಪಿ ಕಾಣಿಯೂರು ಮಠಾಧೀಶ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು ಮಾತಿನ ಚಾಟಿ ಬೀಸಿದ್ದಾರೆ. ನೀವು ರಾಮನನ್ನು ನೋಡಿದ್ದೀರಾ? ನೀವು ಹೇಳಿದ ಹಾಗೆ ರಾಮನ ಮೂರ್ತಿಯನ್ನು ರಚನೆ ಮಾಡೋಣ ಎಂದು ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ (Vidyavallabha Theertha Swamiji), ಆಹ್ವಾನ ಇದ್ದು ಹೋಗದವರ ಬಗ್ಗೆ ನೋ ಕಾಮೆಂಟ್ಸ್. ಅವರಿಗೆ ದೇವರೇ ಬುದ್ದಿ ಕೊಡಬೇಕು. ದೇವರೇ ಅವರನ್ನು ಕರೆಸಿಕೊಳ್ಳುತ್ತಾರೆ ಅಷ್ಟೇ ಹೇಳಬಹುದು ಎಂದರು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಮಗುವಿನಂತೆ ಕಾಣುತ್ತಿಲ್ಲ- ಕೆಂಗಣ್ಣಿಗೆ ಗುರಿಯಾದ ದಿಗ್ವಿಜಯ ಸಿಂಗ್

ರಾಮದೇವರು ಯಾರಿಗೂ ಕನಸಲ್ಲಿ ಬಂದು ಬರಬೇಡ ಎಂದು ಹೇಳಿರುವುದಿಲ್ಲ. ಅದೆಲ್ಲ ಕೇವಲ ಅವರವರ ಕಲ್ಪನೆ. ಮೂರ್ತಿ ರಾಮನಂತಿಲ್ಲ ಎಂದಿರುವ ದಿಗ್ವಿಜಯ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ ದಿಗ್ವಿಜಯ ಸಿಂಗ್ ರಾಮನನ್ನು ನೋಡಿದ್ದಾರಾ ನೋಡಿದ್ದರೆ ಹೇಳಲಿ ರಾಮ ಹೇಗಿದ್ದ ಎಂದು, ಬೇಕಾದರೆ ಅದೇ ತರ ಮಾಡೋಣ. ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ, ಅದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯಾರು ಏನ್ ಬೇಕಿದ್ರೂ ಹೇಳಲಿ, ನಾನು ಅಯೋಧ್ಯೆಗೆ ಹೋಗ್ತೀನಿ: ಹರ್ಭಜನ್ ಸಿಂಗ್

ಹಿಂದು ವೋಟು ಬ್ಯಾಂಕ್ ಬಗ್ಗೆ ಆತಂಕ ಶುರುವಾಗಿದೆ. ರಾಮನ ಬೊಂಬೆ ಇಟ್ಟರು ಎಂದು ಯಾರೋ ಹೇಳಿಕೆ ನೀಡಿದ್ದಾರೆ. ಇವೆಲ್ಲ ನಿರಾಶೆಯ ಪ್ರತೀಕಗಳು ಅಷ್ಟೇ. ಎಲ್ಲರಿಗೂ ಒಳಗಿನಿಂದ ರಾಮನ ಬಗ್ಗೆ ಭಕ್ತಿ ಇರುತ್ತದೆ. ಆದರೆ ಬೇರೊಂದು ಪಕ್ಷದ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ನಿರಾಸೆ ಇರಬಹುದು. ಇದಕ್ಕೆಲ್ಲ ತಲೆ ಕೆಡಿಸಬೇಕಾಗಿಲ್ಲ ಎಂದು ಕಾಣಿಯೂರುಶ್ರೀ (Kaniyoor Shree) ಹೇಳಿದರು.

Share This Article