ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

Public TV
2 Min Read

– ಮಠದಲ್ಲಿ ಸೇವೆ ಮಾಡುವ ಗಂಡು ಮಕ್ಕಳ ಮೇಲೆ ಲೈಂಗಿಕ ಕಿರುಕುಳ

ಮೈಸೂರು: ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠದ ಈ ಸ್ವಾಮಿಜಿಗೆ ಹೆಣ್ಣು ವೇಷವೇ ಅತಿ ಇಷ್ಟವಾಗಿದ್ದು, ತುಂಡು ಬಟ್ಟೆಯಲ್ಲಿ ನಂಗಾನಾಚ್ ಮಾಡಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ. ಜೊತೆಗೆ ಮಠದಲ್ಲಿ ಸೇವೆಗೆಂದು ಗಂಡು ಮಕ್ಕಳನ್ನು ಇರಿಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆ ಎಂಬ ಆರೋಪ ಸ್ವಾಮಿ ಮೇಲೆ ಕೇಳಿಬರುತ್ತಿದೆ.

ಅಷ್ಟಕ್ಕೂ ಈ ಸ್ವಾಮೀಜಿ ಬೇರೆ ಯಾರೂ ಅಲ್ಲ. ಈ ಹಿಂದೆ ಬಾಗಲಕೋಟೆಯಿಂದ ಜನರು ಓಡಿಸಿದ್ದ ವಿದ್ಯಾಹಂಸ ಭಾರತಿ ಸ್ವಾಮೀಜಿ. ಹೌದು, ಮೈಸೂರಿನ ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠವಿದೆ. ಈ ಮಠದ ಪೀಠಾಧ್ಯಕ್ಷನಾಗಿರುವ ವಿದ್ಯಾಹಂಸ ಭಾರತಿ ಸ್ವಾಮೀಜಿ ಎಲ್ಲಿ ಹೋದರು ಅಲ್ಲಿ ಇರಲು ಜನರು ಬಿಡುವುದಿಲ್ಲ. ಯಾಕೆಂದರೆ ಆತ ತೊಡುವ ವೇಷಭೂಷಣ, ವರ್ತಿಸುವ ರೀತಿ ವಿಚಿತ್ರವಾಗಿದೆ. ಆತನ ವರ್ತನೆಯನ್ನು ನೋಡಿ ಸ್ವಾಮೀಜಿಯನ್ನು ಜನ ತಮ್ಮ ಊರಿನಿಂದ ಓಡಿಸುತ್ತಾರೆ. ಈ ಬಾರಿ ನಂಗಾನಾಜ್ ಮಾಡಿ ಸ್ವಾಮೀಜಿ ಸಖತ್ ಫೇಮಸ್ ಆಗಿದ್ದಾನೆ. ಮೈ ಮೇಲೆ ಒಂದು ತುಂಡು ಬಟ್ಟೆ ಸುತ್ಕೊಂಡು ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

ಮೈಸೂರಿನಲ್ಲೂ ಡ್ಯಾನ್ಸ್ ಮಾಡಿ ಪೇರಿ ಕಿತ್ತಿದ್ದ ಈತ, ಬಾಗಲಕೋಟೆಯಲ್ಲೂ ಪೂಜೆ ಮಾಡೋದಕ್ಕೆ ಹೋಗಿ ಅಲ್ಲಿನ ಜನರ ಓಡಿಸಿದ್ದರು. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದ, ಹಾಗೆಯೇ ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬುವಂತೆ ಗ್ರಾಮಸ್ಥರ ತಲೆ ಕೆಡಿಸಿದ್ದ. ಆದರೆ ಆತನ ವಿಚಿತ್ರ ವರ್ತನೆ ನೋಡಿ ಅಲ್ಲಿಂದ ಜನ ಓಡಿಸಿದ್ದರು. ಆದರೆ ಈಗ ಈ ಸ್ವಾಮೀಜಿ ನಂಗಾನಾಚ್ ನಿಂದ ಫೇಮಸ್ ಆಗಿದ್ದಾನೆ.

ತುಂಡು ಬಟ್ಟೆಯಲ್ಲಿ ಹಿಂದಿ ಹಾಡು, ಮದ್ಯ ಕುಡಿಯುತ್ತ ನಂಗಾನಾಚ್ ಮಾಡುತ್ತಾನೆ. ಮದ್ಯ ಇಟ್ಕೊಂಡು ಕುಣಿದು ಕುಪ್ಪಳಿಸೋ ಸ್ವಾಮಿಜಿಯ ಮೇಲೆ ಮತ್ತೊಂದು ಆರೋಪವೂ ಇದೆ. ಗಂಡು ಮಕ್ಕಳನ್ನು ಸೇವೆಗೆ ಇಟ್ಟುಕೊಳ್ಳುವ ಈತ ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಂಡಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಮನೆ ಮಠ ಬಿಟ್ಟು ಬರುವ ಗಂಡು ಮಕ್ಕಳು ಅವನ ಜೊತೆಯಲ್ಲಿಯೇ ಇರಬೇಕು. ಮನೆಗೆ ವಾಪಸ್ಸು ಹೋಗುವ ಹಾಗೇ ಇಲ್ಲ. ಇದೇ ರೀತಿ ಅದೇಷ್ಟೋ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಾ ಇದ್ದಾರೆ.

ಸೇವೆಯ ನೆಪದಲ್ಲಿ ಆತ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸುತ್ತಾನೆ ಎನ್ನಲಾಗಿದೆ. ಭಕ್ತರೊಬ್ಬರ ಪತ್ನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೂಡ ಇತನ ಮೇಲಿದೆ. ಈ ಬಗ್ಗೆ ಭಕ್ತನ ಪತ್ನಿಯೇ ದೂರು ನೀಡಿ ಬಂಧನವಾಗುವಂತೆ ಮಾಡಿದ್ದರು. ಆದರೆ ಜಾಮೀನಿನ ಮೇಲೆ ಈ ಸ್ವಾಮೀಜಿ ಹೊರಗೆ ಬಂದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *