ಹೋಟೆಲ್ ರೂಮಿಗೆ ಬಾ ಎಂದ ನಿರ್ದೇಶಕನಿಗೆ ಚಳಿ ಬಿಡಿಸಿದ್ದ ವಿದ್ಯಾ ಬಾಲನ್

Public TV
2 Min Read

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ನಿರ್ದೇಶಕರೊಬ್ಬರು ಹೋಟೆಲಿನ ರೂಮಿಗೆ ಬರಲು ಹೇಳಿದ್ದನು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು.

ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ ನಿರ್ದೇಶಕರೊಬ್ಬರು ತಮ್ಮನ್ನು ಹೋಟೆಲ್ ರೂಮಿಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದ ವಿಷಯವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದ್ಯಾ, ನನಗೆ ನೆನಪಿದೆ. ನಾನು ಚೆನ್ನೈನಲ್ಲಿ ಕೆಲಸದ ವಿಷಯಕ್ಕಾಗಿ ಒಬ್ಬ ನಿರ್ದೇಶಕರನ್ನು ಭೇಟಿ ಮಾಡಿದೆ. ಆಗ ನಾನು ಅವರಿಗೆ ಕಾಫಿ ಶಾಪ್‍ಗೆ ಹೋಗಿ ಮಾತನಾಡೋಣ ಎಂದು ಹೇಳಿದ್ದೆ. ಆದರೆ ಅವರು ಪದೇ ಪದೇ ರೂಮಿಗೆ ಹೋಗುವುದರ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೆ ನನ್ನ ಜೊತೆ ಮಾತನಾಡಬೇಕು ಎಂದರೆ ರೂಮಿಗೆ ಬರಬೇಕು ಎಂದು ಹೇಳುತ್ತಿದ್ದನು.

ಅಲ್ಲದೆ, ನಾನು ನಿರ್ದೇಶಕನ ಯೋಚನೆಯನ್ನು ತಿಳಿದು ಆತನ ಜೊತೆ ರೂಮಿಗೆ ಹೋಗಿದ್ದೆ. ಆದರೆ ನಾನು ಅಲ್ಲಿ ನಾನು ಬಾಗಿಲನ್ನು ಕ್ಲೋಸ್ ಮಾಡದೇ ಓಪನ್ ಮಾಡಿದ್ದೆ. ಈ ವೇಳೆ ನಿರ್ದೇಶಕ ಏನೂ ಮಾತನಾಡಲಿಲ್ಲ. 5 ನಿಮಿಷದ ನಂತರ ಆತ ಅಲ್ಲಿಂದ ಎದ್ದು ಹೋದನು ಎಂದು ವಿದ್ಯಾ ತಿಳಿಸಿದ್ದಾರೆ.

ಸದ್ಯ ವಿದ್ಯಾ ಅವರು ನಟಿಸಿದ ‘ಮಿಶನ್ ಮಂಗಲ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಒಂದೇ ವಾರದಲ್ಲಿ ಈ ಚಿತ್ರ 100 ಕೋಟಿ ಕಲೆಕ್ಷನ್ ಆಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ಹೊರತಾಗಿ, ಅಕ್ಷಯ್ ಕುಮಾರ್, ಕನ್ನಡ ನಟ ದತ್ತಣ್ಣ, ತಾಪ್ಸಿ ಪನನು, ಕಾರ್ತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನೆನ್ ಹಾಗೂ ಶರಮನ್ ಜೋಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *