ನಲಪಾಡ್ ಗ್ಯಾಂಗಿನಿಂದ ಜೀವಬೆದರಿಕೆ – ವಕೀಲರಿಂದ ಪೊಲೀಸರಿಗೆ ದೂರು

Public TV
2 Min Read

ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಅವರ ಗೂಂಡಾ ಮಗ ನಲಪಾಡ್ ವಿರುದ್ಧ ವಾದ ಮಾಡಿದ್ದಕ್ಕೆ ಆತನ ಬೆಂಬಲಿಗರಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ವಕೀಲ ಶ್ಯಾಮ್ ಸುಂದರ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ಯಾಮ್ ಸುಂದರ್, ಈ ಪ್ರಕರಣದಲ್ಲಿ ನಾನು ವಕೀಲನಾಗಿರುವ ಕಾರಣ ನಿನ್ನೆ ಕೋರ್ಟ್ ಕಲಾಪ ಮುಗಿಸಿದ ಬಳಿಕ ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು. ಈ ವಿಚಾರ ತಿಳಿದು ಪೊಲೀಸರು ನನಗೆ ರಕ್ಷಣೆ ನೀಡಿದರು. ಸಂಜೆ ನಾನು ಆರ್ ಟಿ  ನಗರ ಪೊಲೀಸ್ ಠಾಣೆಗೆ ಬಂದು ಈ ವಿಚಾರ ತಿಳಿಸಿದ್ದು, ಇಂದು ನಾನು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ಆಯುಕ್ತರ ಈ ಪ್ರಕರಣ ಮುಗಿಯುವರೆಗೆ ಭದ್ರತೆ ನೀಡುತ್ತೇವೆ, ಕೋರ್ಟ್ ನಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

ನೇರವಾಗಿ ನನಗೆ ಯಾರು ಬೆದರಿಕೆ ಹಾಕಿಲ್ಲ. ಆದರೆ ಬಲ್ಲ ಮೂಲಗಳು, ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಯ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ. ದೆಹಲಿಯ ನಿರ್ಭಯಾ ಕೇಸ್ ನಂತೆ ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ನಾನು ನಿನ್ನೆ ಪ್ರಬಲವಾಗಿ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದೆ. ಹೀಗಾಗಿ ಆರೋಪಿಗಳಿಂದ ಯಾವುದೇ ತೊಂದರೆ ಆಗದೇ ಇದ್ದರೂ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಇರುವ ಕಾರಣ ದೂರು ನೀಡಿದ್ದೇನೆ ಎಂದು ಶ್ಯಾಮ್ ಸುಂದರ್ ಹೇಳಿದರು. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾದ ಮಂಡಿಸುತ್ತಿದ್ದ ವಕೀಲ ಶ್ಯಾಮ್ ಸುಂದರ್ ಅವರನ್ನು ಆರೋಪಿ ನಲಪಾಡ್ ಹಾಗೂ ಅವರ ಬೆಂಬಲಿಗರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಷ್ಟೇ ಅಲ್ಲದೇ ಕೋರ್ಟ್ ನಿಂದ ಹೊರ ಬರುತ್ತಿದ್ದಾಗ ನಲಪಾಡ್ ಬೆಂಬಲಿಗರು, ನಮ್ಮ ಲಿಸ್ಟ್ ನಲ್ಲಿ ಇವನು ಇದ್ದು, ಇವನಿಗೂ ಗತಿ ಕಾಣಿಸುತ್ತೇವೆ ಎಂದು ಮಾತನಾಡುತ್ತಿದ್ದರು. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

 

https://youtu.be/-BMml-Cw79E

 

 

 

 

 

 

Share This Article
Leave a Comment

Leave a Reply

Your email address will not be published. Required fields are marked *