ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ: ರಾಜೂ ಗೌಡ

Public TV
1 Min Read

ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡ ಬಿರುಸುಗೊಂಡಿದೆ. ಕೈ- ಕಮಲ ಅಭ್ಯರ್ಥಿಗಳಿಂದ ಭರ್ಜರಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಂತೆಯೇ ಬಿಜೆಪಿ ಅಭ್ಯರ್ಥಿ ರಾಜೂ ಗೌಡ ಅವರು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮತಯಾಚನೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ, ತಂದೆಯೂ ಇಲ್ಲ. ನನ್ನ ಪಾಲಿಗೆ ಕಾರ್ಯಕರ್ತರೇ ತಂದೆ-ತಾಯಂದಿರು, ನೀವೇ ಆಶೀರ್ವಾದ ಮಾಡಬೇಕು. ಎಲ್ಲರೂ ಆಶೀರ್ವಾದ ಮಾಡಬೇಕೆಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

ನನ್ನ ತಾಯಿಯನ್ನ ಕಳೆದುಕೊಂಡಾಗ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾಯಿಯನ್ನ ಕಳೆದುಕೊಂಡಾಗಲೂ ಕೆಲಸ ನಿಲ್ಲಿಸಿಲ್ಲ. ಕೊರೋನಾ ಸಂದರ್ಭದಲ್ಲಿ ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!

ರಾಜಾ ವೆಂಕಟಪ್ಪ ನಿಧನದಿಂದ ತೆರವಾಗಿದ್ದ ಸುರುಪುರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಮೇ. 7 ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ರಾಜೂ ಗೌಡ ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕರಿಗೆ ಟಿಕೆಟ್‌ ಕೊಟ್ಟಿದೆ.

Share This Article