ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್‌ – ಯತ್ನಾಳ್‌ ಆರೋಪಕ್ಕೆ ಸಿದ್ದರಾಮಯ್ಯ ಕೆಂಡಾಮಂಡಲ

Public TV
2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಮತ್ತೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಮಧ್ಯೆ ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್‌ (Adjustment Politics) ವಿಷಯದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.

ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಗ್ಯಾರಂಟಿ ಕಾರ್ಡ್‌ಗಳಿಗೆ ಸಹಿ ಹಾಕಿ‌ ಕೊಟ್ಟಿದ್ದೀರಿ. ಎಲ್ಲರಿಗೂ ಖಚಿತ ಉಚಿತ ನಿಶ್ಚಿತ ಎಂದು ಹೇಳಿದ್ದೀರಿ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದೀರಿ. ಈಗ ಸರಾಸರಿ ಲೆಕ್ಕ ತೆಗೆದುಕೊಳ್ಳುತ್ತೀರಿ ಎಂದು ಸೌಮ್ಯವಾಗಿ ಸರ್ಕಾರಕ್ಕೆ ತಿವಿದರು. ಈ ಸಂದರ್ಭದಲ್ಲಿ ಮಂತ್ರಿಯೊಬ್ಬರು ದಾರಿಯಲ್ಲಿ ಹೋಗುವವರಿಗೆ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದ್ದನ್ನು ಉಲ್ಲೇಖಿಸಿ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್‌ ಕೊಟ್ಟರು.  ಇದನ್ನೂ ಓದಿ: ಆವತ್ತು ರೆಬೆಲ್ ವಾರ್, ಇವತ್ತು ಕೂಲ್ ಅಟ್ಯಾಕ್- ವರ್ಗಾವಣೆ ದಂಧೆ ವಿರುದ್ಧ ಬದಲಾಯ್ತಾ HDK ಧೋರಣೆ?

ಕುಮಾರಸ್ವಾಮಿ ಮಾತಿಗೆ ಬಿಜೆಪಿ ಯತ್ನಾಳ್‌ ಧ್ವನಿಗೂಡಿಸಿದಾಗ ಸಿಟ್ಟಾದ ಸಿದ್ದರಾಮಯ್ಯ, ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ. ಒಂದು ವರ್ಷದಿಂದ ಬಳಸುತ್ತಿದ್ದರೆ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡುವ ಅಗತ್ಯ ಇದ್ಯಾ? ನೀವು ಪದೇ ಪದೇ ಮಾತನಾಡಿದರೆ ಸಂಸದೀಯ ಪಟು ಆಗುವುದಿಲ್ಲ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕನಾಗಿಯೂ ಮಾಡುವುದಿಲ್ಲ ಎಂದು ಕಾಲೆಳೆದರು.

ಇದಕ್ಕೆ ಯತ್ನಾಳ್, ನೀವು ಪದೇ ಪದೇ ಹೇಳುತ್ತಿದ್ದರೆ ನಾನೇ ವಿಪಕ್ಷ ನಾಯಕ ಎಂದು ತಿರುಗೇಟು ನೀಡಿದರು. ಇದಕ್ಕೆ ಸಿಎಂ, ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ಆಗುವುದಿಲ್ಲ. ಆರಗ ಆಕಾಂಕ್ಷಿ ಅಲ್ಲ. ಅಶ್ವಥ್ ನಾರಾಯಣ, ಬೊಮ್ಮಾಯಿ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದರು.

ಸಿಎಂ ಹೇಳಿಕೆಗೆ ಯತ್ನಾಳ್‌, ನೀವು ಎಷ್ಟೇ ಬೆಂಕಿ‌ ಹಚ್ಚಿದರೂ ಹಚ್ಚಿಕೊಳ್ಳಲ್ಲ ಅದು. ನೀವು ನನ್ನನ್ನು ಉದ್ದೇಶಿಸಿ ಪದೇ ಪದೇ ವಿಪಕ್ಷ ನಾಯಕ ಆಗುವುದಿಲ್ಲ ಎಂದರೆ ನೀವು ಯಾರ ಜೊತೆಗೋ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದೀರಿ ಅಂತಾಯ್ತು ಎಂದು ಹೇಳಿ ಕಾಲೆಳೆದರು.


ಇದಕ್ಕೆ ಸಿಟ್ಟಾದ ಸಿಎಂ, ನಾನು ಯಾರ ಜೊತೆಗೂ ನನ್ನ ಜೀವನದಲ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ.‌ ಯಾರ ಜೊತೆಗಾದರೂ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿರುವುದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಎಸೆದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್