ಪಕ್ಷದ ಹಿರಿಯರ ಸಲಹೆ ಕೇಳ್ಬೇಕು: ಸಿಎಂ, ಡಿಸಿಎಂ ವಿರುದ್ಧ ಪರಂ ಅಸಮಾಧಾನ

Public TV
1 Min Read

ಬೆಂಗಳೂರು: ವಿಧಾನ ಪರಿಷತ್ (Vidhan Parishad) ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಿಎಂ , ಡಿಸಿಎಂ ವಿರುದ್ಧ ಜಿ.ಪರಮೇಶ್ವರ್ (G Parameshwar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಬ್ಬರೇ ತೀರ್ಮಾನ ಮಾಡಿದರೆ ಸರಿಯಾಗುವುದಿಲ್ಲ. ಪಕ್ಷದ ಹಿರಿಯ ನಾಯಕರ ಸಲಹೆ, ಅಭಿಪ್ರಾಯಗಳನ್ನೂ ಕೇಳಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರು ಹಿರಿಯರು, ಅನುಭವಿ ನಾಯಕರು ಇದ್ದಾರೆ ಅವರ ಜೊತೆ ಚರ್ಚೆ ಒಳ್ಳೆಯದು. ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು ಎಂದು ಹೇಳಿದರು.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಪಕ್ಷದ ತೀರ್ಮಾನವಾಗಿದ್ದು ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತದೆ. ಅದನ್ನು ಶಿವಕುಮಾರ್ (DK Shivakumar) ಮಾಡುವುದಿಲ್ಲ. ಅವರೇ ಇರಲಿ ಅಂದ್ರೆ ಅವರೇ ಇರುತ್ತಾರೆ. ಬೇರೆಯವರು ಬರಲಿ ಅಂದರೆ ಬೇರೆಯವರು ಬರುತ್ತಾರೆ ಎಂದು ಮಾರ್ಮಿಕವಾಗಿ ಟಾಂಗ್ ಕೊಟ್ಟರು.  ಇದನ್ನೂ ಓದಿ: ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ 

ಸಚಿವರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ವಿಚಾರವಾಗಿ ಮಾತನಾಡಿದ ಪರಂ, ನಾನು ಎಂಟು ವರ್ಷ ಅದೇ ಕೆಲಸ ಮಾಡಿದ್ದೇನೆ‌. ಇದು ಹೊಸದೇನಲ್ಲ. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರತಿಯೊಬ್ಬ ಸಚಿವರು ಭೇಟಿ ಕೊಡುತ್ತಿದ್ದರು. ಇದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವು ಹೌದು. ಅದಕ್ಕೆ ಅಧ್ಯಕ್ಷರು ಗಮನಿಸಿ ಸೂಚನೆ ಕೊಟ್ಟಿರಬಹುದು ಎಂದರು.

 

Share This Article