Video Viral | ಪೊಲೀಸರ ಕಣ್ಣೆದುರೇ ಯುವಕರು ಡೆಡ್ಲಿ ಬೈಕ್ ವ್ಹೀಲಿಂಗ್

1 Min Read

ಮೈಸೂರು: ಬೆಂಗಳೂರು (Bengaluru) ಬಳಿಕ ಮೈಸೂರಿನಲ್ಲೂ (Mysuru) ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ. ಪೊಲೀಸರ ಕಣ್ಣೆದುರೇ ಯುವಕರು ಡೆಡ್ಲಿ ಬೈಕ್ ವ್ಹೀಲಿಂಗ್ ಸಾಹಸ ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪದ ಬಳಿ ನಡೆದಿದೆ.

ಬೈಕ್‌ನಲ್ಲಿ ಇಬ್ಬರು ಪೊಲೀಸರು ಹೋಗ್ತಿರುವಾಗಲೇ ಅವರ ಪಕ್ಕದಲ್ಲೇ ಯುವಕರು ವ್ಹೀಲಿಂಗ್ ಮಾಡ್ತಾ ಪುಂಡಾಟ ಮೆರೆದಿದ್ದಾರೆ. ಪೊಲೀಸ್ ಜೀಪ್ ಕೂಡ ಸಮೀಪದಲ್ಲೇ ಹೋಗ್ತಿದ್ದು ಅದಕ್ಕೂ ಹೆದರದೇ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಜೊತೆಗೆ ಡೆಡ್ಲಿ ವ್ಹೀಲಿಂಗ್ ಮಾಡುತ್ತಾ ಪೊಲೀಸ್ ಜೀಪನ್ನೇ ಓವರ್ ಟೇಕ್ ಮಾಡಿದ್ದಾರೆ. ಇದನ್ನೂ ಓದಿ: ರಾಜಶೇಖರ್ ಸಾವು ಆಕಸ್ಮಿಕ ಅಲ್ಲ, ಉದ್ದೇಶಪೂರ್ವಕ ಕೊಲೆ: ಜನಾರ್ದನ ರೆಡ್ಡಿ

ಮೈಸೂರು ನಗರದಲ್ಲಿ ಪುಂಡ-ಪೋಕರಿಗಳಿಗೆ ಪೊಲೀಸರ ಭಯವೇ ಇಲ್ವಾ ಅನ್ನೋ ಪ್ರಶ್ನೆ ಎದುರಾಗ್ತಿದೆ. ಬೈಕ್ ವ್ಹೀಲಿಂಗ್ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಈಗ್ಲಾದರೂ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡು ವ್ಹೀಲಿಂಗ್ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕಿದೆ.

Share This Article