Video Viral | ಹಸಿವಿನಿಂದ ಕಾರ್ಮಿಕರ ಮನೆಗೆ ನುಗ್ಗಿ ಅಕ್ಕಿ ತಿಂದ ಆನೆ

Public TV
1 Min Read

ಚೆನ್ನೈ: ಕಾಡಂಚಿನ ಗ್ರಾಮಗಳಿಗೆ ಆನೆಗಳು (Wild Elephant) ನುಗ್ಗಿ ದಾಂಧಲೆ ಮಾಡುವುದು ಹೊಸದೇನಲ್ಲ. ಹಾಗೆಯೇ ವಲಸೆ ಕಾರ್ಮಿಕರು ನೆಲೆಸಿದ್ದ ಬಾಡಿಗೆ ಮನೆಗೆ ನುಗ್ಗಿದ ಗಂಡು ಕಾಡಾನೆಯೊಂದು ಆಹಾರ ಪದಾರ್ಥಗಳನ್ನ ತಿಂದು ಹೋದ ಘಟನೆ ತಮಿಳುನಾಡು ಕೊಯಮತ್ತೂರು (Coimbatore) ಜಿಲ್ಲೆಯ ತೆರುಕ್ಕುಪಾಳ್ಯಂನಲ್ಲಿ ನಡೆದಿದೆ.

ಆನೆಯು ಮನೆಯತ್ತ ನುಗ್ಗಿ ಬರುತ್ತಿರುವುದನ್ನು ಗಮನಿಸಿರುವ ಕಾರ್ಮಿಕರು ಗ್ಯಾಸ್‌ ಸ್ಟೌ ಆಫ್‌ ಮಾಡಿದ್ದಾರೆ, ಭಯಭೀತರಾಗಿ ಮನೆಯ ಮೂಲೆಯಲ್ಲಿ ಅವಿತು ಕುಳಿತಿದ್ದಾರೆ. ಇದನ್ನೂ ಓದಿ: 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

ಬಳಿಕ ಮನೆಯ ಬಾಗಿಲ ಬಳಿ ಬಂದ ಆನೆ ಸೊಂಡಿಲು ಚಾಚಿ ಅಕ್ಕಿ ಮೂಟೆಯನ್ನು ಎಳೆದುಕೊಂಡಿದೆ. ಗ್ಯಾಸ್‌ ಸಿಲಿಂಡರ್‌ ಸಮೇತ ಮಾಡಿದ್ದ ಅಡುಗೆಯನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದೆ. ಅಕ್ಕಿಯನ್ನೆಲ್ಲ ತಿಂದು ಮುಗಿಸಿದ ಬಳಿಕ ಸ್ಥಳ ಬಿಟ್ಟು ತೆರಳಿದೆ. ಇದನ್ನೂ ಓದಿ: ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

ಈ ದೃಶ್ಯವನ್ನು ಕಾರ್ಮಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದು, ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಸರಣಿ ಅಪಘಾತ – ಕಾರು ಲಾರಿಯ ಕೆಳಗೆ ಸಿಲುಕಿದ್ರೂ ಪವಾಡ ರೀತಿಯಲ್ಲಿ ಚಾಲಕ ಪಾರು

Share This Article