ಚೀನಾ ಭೂಕಂಪ – ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ವೀಡಿಯೋಗಳು

Public TV
2 Min Read

ಬೀಜಿಂಗ್: ಸೋಮವಾರ ಚೀನಾದಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪ ಅಲ್ಲಿನ ಜನರನ್ನು ಭಯಭೀತರನ್ನಾಗಿಸಿದೆ. ನಿನ್ನೆ ಅಪ್ಪಳಿಸಿರುವ ಭೂಕಂಪ ಇತ್ತೀಚಿನ ವರ್ಷಗಳಲ್ಲಿ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದೆ. ನಿನ್ನೆ ಭೂಕಂಪದ ವೇಳೆ ಅಲ್ಲಿನ ಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವೀಡಿಯೋಗಳು ನೋಡುಗರ ಮೈಯನ್ನೇ ಝುಂ ಎನಿಸುವಂತೆ ಮಾಡುತ್ತದೆ. ಹಾಗಿದ್ದರೆ ಅಂತಹ ಭೂಕಂಪವನ್ನು ಅನುಭವಿಸಿದವರ ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದು ಕೂಡಾ ಬೆಚ್ಚಿ ಬೀಳಿಸುವಂತೆ ಮಾಡುತ್ತದೆ.

ವೈರಲ್ ಆಗಿರುವ ವೀಡಿಯೋಗಳಲ್ಲಿ ಭೂಕಂಪದ ರೌದ್ರತೆ ಕಂಡುಬಂದಿದೆ. ಭೂಕಂಪದ ವೇಳೆ ಕಟ್ಟಡಗಳು ಕುಸಿಯುವುದು, ಗೋಪುರಗಳು ಅಲುಗಾಡುವುದು ಕಾಣಿಸಿಕೊಂಡಿದೆ.

ವರದಿಗಳ ಪ್ರಕಾರ ಚೀನಾದಲ್ಲಿ ನಿನ್ನೆ ಸಂಭವಿಸಿದ ಭೂಕಂಪದಿಂದಾಗಿ 65 ಜನರು ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಭೂಕಂಪ ವಲಯದಲ್ಲಿ 200ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ದೂರಸಂಪರ್ಕ, ವಿದ್ಯುತ್ ಸೇವೆಗಳು ಕಡಿತಗೊಂಡಿದ್ದು ಅದನ್ನು ಮರುಸ್ಥಾಪಿಸಲು ಹರಸಾಹಸಪಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

ಚೀನಾದ ಸಿಚುವಾನ್ ಪ್ರದೇಶದಲ್ಲಿ ಭೂಕಂಪಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ ಎನ್ನಲಾಗುತ್ತದೆ. ಸೋಮವಾರ ಘಟಿಸಿದ ಭೂಕಂಪ 2017ರ ಬಳಿಕ ಸಂಭವಿಸಿದ ಅತಿ ದೊಡ್ಡ ಭೂಕಂಪ ಎಂದು ವರದಿಯಾಗಿದೆ. 2008ರಲ್ಲಿ ಚೀನಾದಲ್ಲೇ ಅತ್ಯಂತ ವಿನಾಶಕಾರಿ ಭೂಕಂಪ ಸಂಭವಿಸಿತ್ತು. 14 ವರ್ಷಗಳ ಹಿಂದೆ 8.0 ತೀವ್ರತೆಯ ಭೂಕಂಪ ಅಪ್ಪಳಿಸಿ, ಸುಮಾರು 70,000 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಿಮ್ಸ್ ಸಿಬ್ಬಂದಿ ಎಡವಟ್ಟು- ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಪತ್ನಿ ಕೈಗಿಟ್ಟ ಸಿಬ್ಬಂದಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *