ಯುವತಿಯ ಸ್ನಾನದ ವೀಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಯುವಕ!

By
1 Min Read

ಮಂಗಳೂರು: ಪಕ್ಕದ ಮನೆ ಯುವತಿಯ ಸ್ನಾನದ ವೀಡಿಯೋ ಚಿತ್ರೀಕರಿಸಲು ಮೊಬೈಲ್ ಇರಿಸಿ ಯುವಕನೊಬ್ಬ ಸಿಕ್ಕಿಬಿದ್ದ ಪ್ರಕರಣ ನಗರದ ಹೊರವಲಯದ ಪಕ್ಷಿಕೆರೆಯಲ್ಲಿ (Pakshikere) ನಡೆದಿದೆ.

ಸುಮಂತ್ ಪೂಜಾರಿ (22) ಎಂಬಾತ ಪಕ್ಕದ ಮನೆಯ ಯುವತಿ ಸ್ನಾನ ಮಾಡುವ ಸಮಯ ನೋಡಿ ಸ್ನಾನಗೃಹದಲ್ಲಿ ಮೊಬೈಲ್ ಇಟ್ಟಿದ್ದ. ಆದರೆ ಯುವತಿಯ ಬದಲಾಗಿ ಆಕೆಯ ಅಣ್ಣ ಪ್ರಜ್ವಲ್ ಸ್ನಾನಕ್ಕೆ ತೆರಳಿದ್ದಾನೆ. ಈ ವೇಳೆ ಮೊಬೈಲ್ ಅಡಗಿಸಿಟ್ಟುರುವುದು ಪತ್ತೆಯಾಗಿದೆ. ಮೊಬೈಲ್‍ನಲ್ಲಿ ಕ್ಯಾಮೆರಾ ಆನ್ ಆಗಿರುವುದನ್ನು ನೋಡಿದ ಯುವತಿಯ ಅಣ್ಣನಿಗೆ ಸಂಶಯ ಬಂದು ಪರಿಶೀಲಿಸಿದ್ದಾನೆ. ಈ ವೇಳೆ ಮೊಬೈಲ್ ಸುಮಂತ್ ಪೂಜಾರಿಯದ್ದು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂ ನಿಂದ ತಮಿಳುನಾಡಿಗೆ ನೀರು ಬಿಡುಗಡೆ

ಕೂಡಲೇ ಪ್ರಜ್ವಲ್ ಸ್ಥಳೀಯರ ಸಹಾಯದಿಂದ ಸುಮಂತ್‍ನನ್ನು ಹಿಡಿದು ವಿಚಾರಿಸಿದ್ದಾನೆ. ಬಳಿಕ ಆತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸುಮಂತ್ ಪೂಜಾರಿಯನ್ನು ಪೊಲೀಸರು‌ (Police) ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ – ಟೆಕ್ಕಿ ಅರೆಸ್ಟ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್