ಗಣೇಶ ಉತ್ಸವದಲ್ಲಿ ಅಭಿಮಾನಿಗಳ ಜೊತೆ ಪುನೀತ್, ರಾಘಣ್ಣ ಭರ್ಜರಿ ಸ್ಟೆಪ್ಸ್- ವಿಡಿಯೋ

Public TV
1 Min Read

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಗಣೇಶ ಉತ್ಸವದಲ್ಲಿ ಅಭಿಮಾನಿಗಳ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಸದಾಶಿವನಗರ ಫ್ರೆಂಡ್ಸ್ aಸೋಸಿಯೇಷನ್ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಗುರುವಾರ ರಾತ್ರಿ ಗಣೇಶ ಉತ್ಸವದಲ್ಲಿ ಸಹೋದರರಾದ ಪುನೀತ್ ರಾಜ್‍ಕುಮಾರ್ ಹಾಗೂ ರಾಘಣ್ಣ ಭಾಗವಹಿಸಿ, ಅಣ್ಣಮ್ಮ ಬೀಟ್ಸ್ ಗೆ ಸ್ಟೆಪ್ಸ್ ಹಾಕಿದ್ದರು.

ಸ್ಯಾಂಡಲ್‍ವುಡ್ ಸ್ಟಾರ್ ದಂಪತಿಗಳ ಮನೆಯಲ್ಲೂ ಗಣಪನ ಆರಾಧನೆ ಜೋರಾಗಿಯೇ ನಡೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿದೇರ್ಶಕ ಪ್ರೇಮ್ ಮನೆಯಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

ಉಪೇಂದ್ರ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉಪೇಂದ್ರ ದಂಪತಿ ಒಟ್ಟಿಗೆ ಪೂಜೆ ಮಾಡಿದರು. ಮನೆ ಮಂದಿಯಲ್ಲಾ ಸೇರಿ ಈ ಹಬ್ಬವನ್ನು ನಾವು ಮಾಡುತ್ತೇವೆ. ನನಗೆ ಗಣೇಶ ಅಂದರೆ ತುಂಬಾ ಪ್ರೀತಿ. ನಾಡಿನ ಜನತೆಗ ಗಣಪ ಒಳ್ಳೆಯದನ್ನು ಮಾಡಲಿ ಅಂತಾ ಉಪ್ಪಿ ಶುಭಾಶಯಯವನ್ನು ಕೋರಿದ್ದಾರೆ. ಗಣೇಶ ಹಬ್ಬ ಮಾಡೋದಕ್ಕೆ ಬಹಳ ಖುಷಿಯಾಗುತ್ತೆ. ಮನೆ ಮಕ್ಕಳೆಲ್ಲ ಸೇರಿ ಹಬ್ಬವನ್ನು ಮಾಡ್ತಿವಿ ಅಂತಾ ಹಬ್ಬದ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಉಪೇಂದ್ರ ತಿಳಿಸಿದರು.

ಜೋಗಿ ಪ್ರೇಮ್ ಮನೆಯಲ್ಲೂ ಗಣೇಶನ ಸಂಭ್ರಮಾಚರಣೆ ಅದ್ಧೂರಿಯಾಗಿಯೇ ನಡೆದಿದ್ದು, ಪರಿಸರ ಸ್ನೇಹಿ ಗಣೇಶನಿಗೆ ರಕ್ಷಿತಾ ಪ್ರೇಮ್ ದಂಪತಿ ಗಣೇಶನಿಗೆ ಪೂಜೆ ಮಾಡಿದರು. ಜೊತೆಗೆ ಬಹು ನಿರೀಕ್ಷೆ ಹುಟ್ಟಿಸಿರೋ `ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ಅನ್ನು ವಿನಾಯಕನ ಸಮ್ಮುಖ ಅನೌನ್ಸ್ ಮಾಡಿದ ಜೋಗಿ ಪ್ರೇಮ್ ಅಕ್ಟೋಬರ್ 18ರಂದು ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆಯಾಗುತ್ತೆ. ಅಷ್ಟೇ ಅಲ್ಲದೇ ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ ಅಂತಾ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ನೀಡಿದ್ದಾರೆ.

ಸದ್ಯ ತೆರೆ ಮೇಲೆ ಮಿಂಚುವ ಸಿನಿ ನಟರು ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಸ್ಥಾಪಿಸಿ, ಅಲಾಂಕರ ಮಾಡಿ ಪೂಜೆ ಪುನಸ್ಕಾರ, ಹೋಮ ಹವನ ಮಾಡಿ ಭಗವಂತನ ಕೃಪೆಗೆ ಪಾತ್ರರಾದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *