Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ

By
1 Min Read

ಹಾಸನ: ಸ್ವಾತಂತ್ರ‍್ಯ ದಿನದಂದು (Independence Day) ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ ಮಾಡಿ, ನೌಕರರು ಡಿಜೆ ಸಾಂಗ್‌ಗೆ ಸ್ಟೆಪ್ ಹಾಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಅಂಚೆ ಕಚೇರಿಯಲ್ಲಿ (Beluru Town Post Office) ನಡೆದಿದೆ.

ಸ್ವಾತಂತ್ರ‍್ಯ ದಿನದಂದು (ಆ.15) ಅಧಿಕಾರಿಗಳು ಅಂಚೆಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ನಂತರ ಸಿಬ್ಬಂದಿ, ಪೋಸ್ಟ್ ಮಾಸ್ಟರ್‌ಗಳು ಹಾಗೂ ಮಹಿಳಾ ಸಿಬ್ಬಂದಿ ಅಂಚೆ ಕಚೇರಿಯೊಳಗೆ ನಾನ್‌ವೆಜ್ ಅಡುಗೆ ಮಾಡಿದ್ದರು. ಭರ್ಜರಿ ಬಾಡೂಟ ಸವಿದ ಸಿಬ್ಬಂದಿ, ಬಳಿ ಡಿಜೆ ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದರು. ಇದನ್ನೂ ಓದಿ: ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

ಇದೀಗ ಅಂಚೆ ಇಲಾಖೆ ನೌಕರ ಭರ್ಜರಿ ಡ್ಯಾನ್ಸ್‌ನ ವೀಡಿಯೋ ವೈರಲ್ ಆಗಿದ್ದು, ಸಿಬ್ಬಂದಿ ವರ್ತನೆಗೆ ಸಾರ್ವಜನಿಕ ವಲಯದಲ್ಲೇ ವ್ಯಾಪಕ ಆಕ್ರೋಶವಾಗಿದೆ. ಸ್ವಾತಂತ್ರ‍್ಯ ದಿನಾಚರಣೆ ದಿನದಂದು ನಿಯಮ ಉಲ್ಲಂಘನೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article