ಮದುವೆಯುದ್ದಕ್ಕೂ ಗಳಗಳನೆ ಕಣ್ಣೀರು ಹಾಕಿದ ವರ!

Public TV
1 Min Read

ಪಾಟ್ನಾ: ಮದುವೆ ಅಂದ್ರೆ ವಧು ವರರಿಗೆ ಸಂತೋಷದ ದಿನವಾಗಿರುತ್ತೆ. ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಭಾವುಕಳಾಗಿ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ವರ ಮದುವೆಯಾಗುವಾಗ ಗಳಗಳನೆ ಅತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಬಿಹಾರದಲ್ಲಿ ಈ ಘಟನೆ ನಡೆದಿದ್ದು, ವರನನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಈ ರೀತಿ ಬಲವಂತವಾಗಿ ಮದುವೆ ಮಾಡಿಸುವುದು ಬಿಹಾರದಲ್ಲಿ ಕಾಮನ್. ಇತ್ತೀಚೆಗೆ ಇದರ ಬಲಿಪಶುವಾಗಿದ್ದು ವಿನೋದ್ ಯಾದವ್.

ವಿನೋದ್ ಬೊಕಾರೋ ಸ್ಟೀಲ್ ಪ್ಲಾಂಟ್‍ನಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ವಿನೋದ್‍ಗೆ ಎಲ್ಲಿ ಬೇಕೋ ಅಲ್ಲಿಗೆ ವರ್ಗಾವಣೆ ಮಾಡಿಸುವ ವ್ಯವಸ್ಥೆ ಮಾಡಲು ಸಚಿವರೊಬ್ಬರನ್ನು ಭೇಟಿ ಮಾಡಿಸುವುದಾಗಿ ಹೇಳಿ ಮೊಕಾಮಾಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಅಲ್ಲಿಂದ ವಿನೋದ್‍ರನ್ನು ಕಿಡ್ನಾಪ್ ಮಾಡಿದ್ದಾರೆ.

ಕಿಡ್ನಾಪರ್‍ಗಳು ಶಸ್ತ್ರಾಸ್ತ್ರಗಳನ್ನ ಹೊಂದಿದ್ದು, ವಿನೋದ್‍ಗೆ ಹೊಡೆದಿದ್ದಾರೆ. ಇದಕ್ಕೆ ವಿನೋದ್ ವಿರೋಧ ವ್ಯಕ್ತಪಡಿಸಿದಾಗ, ನಿನಗೆ ಮದುವೆ ಮಾಡಿಸ್ತಿದ್ದೀವಿ ಅಷ್ಟೇ, ನೇಣು ಹಾಕ್ತಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಸಾಕಷ್ಟು ಜನ ಇದೇ ರೀತಿ ಮದುವೆ ಆಗಿದ್ದಾರೆ. ಇದೇನು ಹೊಸದಲ್ಲ ಎಂದು ಹೇಳಿದ್ದಾರೆ.

 

ಮದುವೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಿ ವಿನೋದ್‍ರನ್ನ ಅಲ್ಲಿಗೆ ಕರೆದೊಯ್ದು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಜೊತೆಗೆ ಬಲವಂತದ ಮದುವೆಯ ವಿಡಿಯೋವನ್ನೂ ಮಾಡಿದ್ದಾರೆ. ವಿನೋದ್ ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿದ್ದು, ಅಳುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇಷ್ಟಾದರೂ ಪ್ರತ್ಯಕ್ಷದರ್ಶಿಗಳು ಮಾತ್ರ ವಿನೋದ್ ಸ್ಥಿತಿಯ ಬಗ್ಗೆ ಕ್ಯಾರೇ ಅಂದಿಲ್ಲ. ಅಲ್ಲೇ ಇದ್ದವರೊಬ್ಬರು ವಿನೋದ್ ಧರಿಸಿದ್ದ ಶಲ್ಯವನ್ನೇ ತೆಗೆದುಕೊಂಡು ಅವರ ಕಣ್ಣೀರು ಒರೆಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *