ಕುಡುಕರ ದೇಶಭಕ್ತಿ ತೋರಿಸುವ ವೈರಲ್ ವಿಡಿಯೋ

Public TV
1 Min Read

ಬೆಂಗಳೂರು: ಬಾರ್‌ವೊಂದರಲ್ಲಿ ಕುಡಿಯಲು ಕುಳಿತಿದ್ದ ಜನರು ಟಿವಿಯಲ್ಲಿ ರಾಷ್ಟ್ರಗೀತೆ ಬರುತ್ತಿದ್ದಂತೆ ಎದ್ದು ನಿಂತು ಗೌರವ ನೀಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.

ವಿಶ್ವಕಪ್ ಟೂರ್ನಿಯ ಭಾಗವಾಗಿ ಭಾನುವಾರ ಭಾರತ ಹಾಗೂ ಇಂಗ್ಲೆಂಡ್ ನಡುವೆ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯದ ಬಾರ್ ನಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಬಾರಿನ ಯಾವ ಟೇಬಲ್ ಕೂಡ ಖಾಲಿ ಇರಲಿಲ್ಲ. ಈ ವೇಳೆ ಬಾರಿನಲ್ಲಿ ಅಳವಡಿಸಿದ್ದ ಟಿವಿಯಲ್ಲಿ ಪಂದ್ಯ ಆರಂಭವಾಗಿತ್ತು. ಎಲ್ಲರೂ ಕುಡಿಯುತ್ತ ಮ್ಯಾಚ್ ನೋಡಲು ಸಿದ್ಧರಾಗಿದ್ದರು.

ಪಂದ್ಯ ಆರಂಭವಾಗುವ ಮುನ್ನ ಟಿವಿಯಲ್ಲಿ ರಾಷ್ಟ್ರಗೀತೆ ಬರುತ್ತಿದ್ದಂತೆ ಕುಡಿಯೋದನ್ನು ನಿಲ್ಲಿಸಿದ್ದ ಎಲ್ಲರೂ ಎದ್ದು ನಿಂತು ದೇಶಭಕ್ತಿ ತೋರಿದ್ದಾರೆ. ಕುಡುಕರ ಈ ದೇಶಪ್ರೇಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *