ಕಳ್ಳ ಸಂಬಂಧ ಆರೋಪ – ಯುವಕನನ್ನ ಥಳಿಸಿ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಸಿದ ಗ್ಯಾಂಗ್‌

Public TV
2 Min Read

ಪಾಟ್ನಾ: ವೈವಾಹಿಕ ಜೀವನದಲ್ಲಿ ವಂಚನೆ ಎಂಬುದು ಇತ್ತೀಚಿಗೆ ತುಂಬಾ ಸಾಮಾನ್ಯವಾಗಿ ಹೋಗಿದೆ. ಗಂಡಸರು, ಇನ್ನೊಬ್ಬ ಮಹಿಳೆಯರ ಜೊತೆ, ಮಹಿಳೆಯರು ಗಂಡನ ಬಿಟ್ಟು ಮತ್ತೊಬ್ಬ ಪರಪುರುಷನ ಜೊತೆ ಅಕ್ರಮ ಸಂಬಂಧ (Affair) ಇಟ್ಟುಕೊಂಡಿರುತ್ತಾರೆ. ಮದುವೆಯೆಂಬ ಸಂಬಂಧದಲ್ಲಿ ಸಂಗಾತಿಗೆ ಹೆಚ್ಚು ಮೋಸ ಮಾಡುವವರು ಮಹಿಳೆಯರೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪುರುಷರು ಎನ್ನುತ್ತಾರೆ.

ಅಕ್ರಮ ಸಂಬಂಧಗಳು ಸುಖವಾಗಿ ಸಂಸಾರ ನಡೆಸುತ್ತಿರುವವರ ಜೀವನಕ್ಕೆ ಕೊಳ್ಳಿ ಇಟ್ಟಂತೆ. ಇದು ಅನೇಕ ದಂಪತಿಗಳನ್ನು ದೂರ ಮಾಡಿದೆ. ಸಾಕಷ್ಟು ಸಂಸಾರಗಳನ್ನು ಒಡೆದು ಹಾಕಿದೆ. ಇಂತಹದ್ದೇ ಘಟನೆಯೊಂದು ಈಗ ಬಿಹಾರದಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಅಂತ ಆರೋಪಿಸಿ 24 ವರ್ಷದ ಯುವಕನನ್ನ ತನ್ನ ಚಿಕ್ಕಮ್ಮನೊಂದಿಗೆ ಮದ್ವೆ ಮಾಡಿಸಿರುವ ಘಟನೆ ಬಿಹಾರದ (Bihar) ಸುಪೌಲ್‌ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ದಾವಣಗೆರೆ| ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಯುವಕ ಸಾವು

ವರದಿಯ ಪ್ರಕಾರ, ಇದೇ ಜುಲೈ 2ರಂದು ಮಿಥಲೇಶ್ ಕುಮಾರ್ ಮುಖಿಯಾ ಎಂಬ ಯುವಕನಿಗೆ ಜನರ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿ, ಜೀವ್‌ಚಾಪುರದಲ್ಲಿರುವ ಅವರ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಮನೆಗೆ ಕರೆದೊಯ್ದಿದೆ. ಅಲ್ಲಿ ಅವನ ಚಿಕ್ಕಮ್ಮನ ಜೊತೆಗೆ ಮದುವೆ ಮಾಡಿಸಿದೆ. ಈ ಕುರಿತು ಯುವಕನ ತಂದೆ ರಾಮಚಂದ್ರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: 77 ಲಕ್ಷ ವಂಚನೆ – ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಅರೆಸ್ಟ್‌

ತಮ್ಮ ಚಿಕ್ಕಪ್ಪನ ಪತ್ನಿ ರೀಟಾ ದೇವಿ ಜೊತೆಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಯುವಕರ ಗುಂಪೊಂದು ನನ್ನ ಮಗನನ್ನ ಥಳಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ರೀಟಾ ದೇವಿ ಮತ್ತು ಶಿವಚಂದ್ರ ದಂಪತಿಗೆ ಈಗಾಗಲೇ 4 ವರ್ಷದ ಮಗನಿದ್ದಾನೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

ಟನೆಯ ವಿಡಿಯೋ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸ್ಥಳೀಯ ಯುವಕರ ಗುಂಪೊಂದು ರಾಡ್‌ನಿಂದ ಕ್ರೂರವಾಗಿ ಥಳಿಸಿರುವುದು ಕಂಡುಬಂದಿದೆ. ಈ ವೇಳೆ ಮಧ್ಯಪ್ರವೇಶಿಸಿದ ಮಿಥಲೇಶ್‌ ತಂದೆ-ತಾಯಿಗೂ ಜನರ ಗುಂಪು ಥಳಿಸಿದೆ. ಬಳಿಕ ಅಲ್ಲಿಗೆ ಚಿಕ್ಕಮ್ಮ ರೀಟಾಳನ್ನ ಕರೆತಂದು ಹಣೆಗೆ ಬಲವಂತವಾಗಿ ಸಿಂಧೂರ ಹಚ್ಚಿಸಿ ಮದುವೆ ಮಾಡಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಜೀವ್‌ಚಾಪುರದ ನಿವಾಸಿಗಳಾದ ರಾಜ ಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್, ಸುರೇಶ್ ಮುಖಿಯಾ ಮತ್ತು ಭೀಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಂಜ್ ನಿವಾಸಿಗಳಾದ ರಾಹುಲ್ ಕುಮಾರ್ ಮತ್ತು ಸಜನ್ ಸಾಹ್ನಿ ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ಆರೋಪಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share This Article