ಮಡಿಕೇರಿ: ಕೊಡಗಿನ ಮಹಾ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇದರಿಂದ ನಗರದ ಅನೇಕ ಗ್ರಾಮ, ನಗರ ಪ್ರದೇಶಗಳು ಮುಳುಗಿ ಹೋಗಿದೆ. ಸದ್ಯ ಈಗ ಕೊಡಗಿನ ಮಂದಿ ತಮ್ಮ ನೋವು ಮರೆಯಲು ವಾಲಗಕ್ಕೆ ಸ್ಟೆಪ್ ಹಾಕ್ತಿದ್ದಾರೆ.
ಮಹಾ ಮಳಗೆ ಕೊಡಗಿನ ಅನೇಕ ಜನರು ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ಇದ್ದಾರೆ. ಮಡಿಕೇರಿ ನಗರದ ಚೌಡೇಶ್ವರಿ ಭವನದಲ್ಲಿ ಮನೆ ಮಠ ಕಳೆದುಕೊಂಡ ಎಲ್ಲಾ ಧರ್ಮದ ನಿರಾಶ್ರಿತರು ತಮ್ಮ ನೋವು ಮರೆಯಲು ಕೊಡವ ವಾಲಗಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಒಂದಷ್ಟು ನೋವುಗಳನ್ನು ಮರೆತು ಖುಷಿಯ ಅಲೆಯಲ್ಲಿ ತೇಲಾಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾ ಮಳೆಯಿಂದ ಪ್ರವಾಹ, ಗುಡ್ಡ ಕುಸಿತವಾಗಿ ಹಲವಾರು ಸಂಕಷ್ಟಕ್ಕೆ ಕಾರಣವಾಗಿದ್ದ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊಡಗು, ಕೇರಳ ಮಳೆಯ ರಹಸ್ಯ ಭೇದಿಸಿದ ಹವಾಮಾನ ತಜ್ಞರು!
https://www.youtube.com/watch?v=G1gr8F0Iuh0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv