ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ

Public TV
2 Min Read

ಚಂಡೀಗಢ: ಹರಿಯಾಣಮಹಿಳಾ ಆಯೋಗದ ಅಧ್ಯಕ್ಷೆ (Chief of the Women’s Panel) ಮತ್ತು ಮಹಿಳಾ ಪೊಲೀಸ್ ಅಧಿಕಾರಿಯ(Woman Police Officer) ನಡುವೆ ಮಾತಿನ ಚಕಮಕಿ ನಡೆದಿದ್ದು, ಕ್ಯಾಮೆರಾ ಇರುವುದನ್ನು ಲೆಕ್ಕಿಸದೇ ಅಶ್ಲೀಲ ಪದಗಳನ್ನು ಬಳಸಿದ್ದಾರೆ.

ಹರಿಯಾಣದ(Haryana) ಕೈತಾಲ್‍ನಲ್ಲಿ ವೈವಾಹಿಕ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಸಭೆ ವೇಳೆ ಮಹಿಳಾ ಸಮಿತಿಯ ಮುಖ್ಯಸ್ಥೆ ರೇಣು ಭಾಟಿಯಾ(Renu Bhatia) ಅವರು ಪೊಲೀಸ್ ಅಧಿಕಾರಿಯ ಮೇಲೆ ಕೂಗಾಡಿದ್ದಾರೆ. ಇದನ್ನೂ ಓದಿ: ದ್ರಾವಿಡ್ ಕೋಚ್ ಆಗಿ ಹನಿಮೂನ್ ಅವಧಿ ಮುಗಿದಿದೆ ನೆನಪಿರಲಿ: ಸಬಾ ಕರೀಂ ಟಾಂಗ್

ವೀಡಿಯೋದಲ್ಲಿ ನೀವು ಅವನ ಕಪಾಳಕ್ಕೆ ಹೊಡೆಯಬಹುದಾಗಿತ್ತು. ಮಹಿಳೆಯನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸುವ ಅಗತ್ಯವಿತ್ತಾ? ನಿಮ್ಮಿಂದ ನಾನು ಯಾವುದೇ ಕಾರಣವನ್ನು ಕೇಳಲು ಬಯಸುವುದಿಲ್ಲ. ಹೊರಗೆ ಹೋಗಿ. ಎಸ್‍ಎಚ್‍ಒ ಆಕೆಯನ್ನು ಹೊರಗೆ ಕರೆದೊಯ್ಯಿರಿ, ನೀವು ಇಲಾಖಾ ವಿಚಾರಣೆಯನ್ನು ಎದುರಿಸುತ್ತೀರಾ ಎಂದು ಪೊಲೀಸ್ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್‌ ಸ್ಪಷ್ಟನೆ

ಈ ವೇಳೆ ನಾನು ಅವಮಾನ ಮಾಡಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ಅವರು ಹೇಳುವುದನ್ನು ಕೇಳಬೇಕಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದಾಗ, ಹಾಗಾದರೆ ನೀವು ಮಹಿಳೆಯನ್ನು ಅವಮಾನಿಸಲು ಇಲ್ಲಿಗೆ ಬಂದಿದ್ದೀರಾ ಎಂದು ರೇಣು ಭಾಟಿಯಾ ಕಿಡಿಕಾರಿದ್ದಾರೆ. ಪತಿ-ಪತ್ನಿಯರ ನಡುವಿನ ಜಗಳವನ್ನು ಸರಿಪಡಿಸುವ ವಿಚಾರವಾಗಿ ಪೊಲೀಸ್ ಅಧಿಕಾರಿ ಕೂಡ ವಾದ ಮಾಡಿದ್ದಾರೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಬಾಟಿಯಾ ಅವರು, ನಾವು ಪತಿ ಮತ್ತು ಪತ್ನಿ ನಡುವಿನ ಜಗಳ ಕುರಿತ ಪ್ರಕರಣವನ್ನು ನಿಭಾಯಿಸುತ್ತಿದ್ದೇವೆ. ಪತಿ ಆಯೋಗದ ಸದಸ್ಯರು ಮತ್ತು ಪೊಲೀಸರೊಂದಿಗೆ ಹಲವಾರು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ವ್ಯಕ್ತಿ ತನ್ನ ಹೆಂಡತಿಯನ್ನು ಬಿಡಲು ಮುಂದಾಗಿದ್ದೇನೆ. ಏಕೆಂದರೆ ಅವನ ಪ್ರಕಾರ ಆಕೆ ದೈಹಿಕವಾಗಿ ಸದೃಢಳಾಗಿಲ್ಲ. ಆದ್ದರಿಂದ, ನಾವು ಅವರಿಬ್ಬರಿಗೂ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿದ್ದೇವೆ. ಆದರೆ ಮಹಿಳೆಯನ್ನು ಮೂರು ಬಾರಿ ಪರೀಕ್ಷಿಸಿದ್ದಾರೆ, ವ್ಯಕ್ತಿ ಮಾತ್ರ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದಾನೆ. ತನಿಖಾಧಿಕಾರಿಯೂ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *