ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ

Public TV
3 Min Read

– ದೇವರ ದಯೆಯಿಂದ ಮೊದಲಿಗಿಂತ ದೊಡ್ಡ ಮಸೀದಿ ನಿರ್ಮಾಣವಾಗ್ತಿದೆ; ವಿಡಿಯೋದಲ್ಲಿ ಹೇಳಿಕೆ

ಇಸ್ಲಾಮಾಬಾದ್‌: ಆಪರೇಷನ್ ಸಿಂಧೂರದಲ್ಲಿ (Operation Sindoor) ಭಾರತೀಯ ಸೇನೆಯ ಶೌರ್ಯ, ಸಾಹಸ ಇಡೀ ವಿಶ್ವಕ್ಕೇ ಗೊತ್ತಾಗಿದೆ. ಭಾರತ ನಡೆಸಿದ ವಾಯುದಾಳಿಗೆ ಸಿಲುಕಿ ಪಾಕಿಸ್ತಾನ ಹಿಂಡಿ ಹಿಪ್ಪೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಮುಗಿದು ಹಲವು ದಿನಗಳು ಕಳೆದರೂ ಅದರ ಪರಿಣಾಮಗಳು ಮಾತ್ರ ಇನ್ನೂ ಮುಗಿದಿಲ್ಲ. ಅದ್ರಲ್ಲೂ ಭಾರತದ ದಾಳಿಯಲ್ಲಿ ಏನೂ ಆಗೇ ಇಲ್ಲ ಎಂದು ಮೀಸೆ ತಿರುವುತ್ತಿರುವ ಪಾಕಿಸ್ತಾನದ (Pakistan) ಸುಳ್ಳುಗಳನ್ನು ಸ್ವತಃ ಅಲ್ಲಿನೇ ಉಗ್ರರೇ ಬಟಾಬಯಲು ಮಾಡುತ್ತಿದ್ದಾರೆ.

ಈ ಹಿಂದೆ ಪಾಕಿಸ್ತಾನದ ಸುಳ್ಳುಗಳನ್ನು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆ ಬಯಲು ಮಾಡಿತ್ತು. ಇದೀಗ ಲಷ್ಕರ್-ಎ-ತೊಯ್ಬಾ (Lashkar-e-Taiba) ಕೂಡ ಆಪರೇಷನ್‌ ಸಿಂಧೂರಕ್ಕೆ ಸಾಕ್ಷ್ಯ ನೀಡಿದೆ. ಭಾರತದ ‘ಆಪರೇಷನ್ ಸಿಂಧೂರ’ದ ಯಶಸ್ಸನ್ನು ಈ ಉಗ್ರಗಾಮಿ ಸಂಘಟನೆಯೇ ಒಪ್ಪಿಕೊಂಡಿದೆ. ಭಾರತೀಯ ಸೇನೆಯು ತಮ್ಮ ಪ್ರಮುಖ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿರುವುದಾಗಿ ಲಷ್ಕರ್ ಕಮಾಂಡರ್ ಖಾಸಿಂ ವೀಡಿಯೋ ಮೂಲಕ ಸತ್ಯ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ

ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಖಾಸಿಂ, ನಾನೀಗ ಭಾರತ ದಾಳಿ ಮಾಡಿ ನಾಶಪಡಿಸಿದ ಮುರಿಡ್ಕೆಯ ಮರ್ಕಜ್ ತೈಬಾ ಕ್ಯಾಂಪ್ ಮುಂದೆ ಇದ್ದೀನಿ. ಈ ಶಿಬಿರವನ್ನ ಭಾರತೀಯ ಪಡೆಗಳು ಹೊಡೆದುರುಳಿಸಿವೆ. ಆದ್ರೆ ಕಟ್ಟಡದ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವರ ದಯೆಯಿಂದ ಮೊದಲಿಗಿಂತಲೂ ದೊಡ್ಡ ಮಸೀದಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾನೆ.

ಆಪರೇಷನ್‌ ಸಿಂಧೂರಕ್ಕೆ ಕಾರಣ ಏನು?
ಏಪ್ರಿಲ್‌ 22ರಂದು ಸೈನಿಕರ ಸೋಗಿನಲ್ಲಿ ಬಂದಿದ್ದ ಪಾಕ್‌ ಮೂಲದ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನೆತ್ತರ ಕೋಡಿ ಹರಿಸಿದ್ದರು. ಓರ್ವ ವಿದೇಶಿಗ ಸೇರಿ 26 ಪ್ರವಾಸಿಗರ ನರಮೇಧ ನಡೆಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರ ರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದನ್ನೂ ಓದಿ: ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

ಇತ್ತ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜರಲ್ ಅನಿಲ್ ಚೌಹಾಣ್ ಮಧ್ಯರಾತ್ರಿ 1 ಗಂಟೆಗೆ ಯಾಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಯ್ತು ಅನ್ನೋದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಳಗಿನ ಜಾವದ ನಮಾಜ್ ಮಾಡುವ ಸಮಯವನ್ನು ತಪ್ಪಿಸುವ ಸಲುವಾಗಿ ಈ ಯೋಜನೆ ಮಾಡಬೇಕಾಯ್ತು. ಆ ಸಮಯದಲ್ಲಿ ಅಲ್ಲಿನ ಸಾಕಷ್ಟು ಜನ ತೊಂದರೆಗೆ ಸಿಲುಕಬಹುದು ಅಂತ ಮಧ್ಯರಾತ್ರಿ ವೇಳೆ ಕಾರ್ಯಾಚರಣೆ ಮಾಡಿದ್ದೇವು ಎಂದಿದ್ದಾರೆ. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

Share This Article