ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

Public TV
1 Min Read

ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲವು ದಿನಗಳಿಂದ ಆರೋಗ್ಯದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸದೊಂದು ವೀಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ.

ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಸ್ಥಿರವಾಗಿ ನಿಲ್ಲಲು ಹೆಣಗಾಡಿದ್ದಾರೆ. ತಮ್ಮ ಕಾಲುಗಳು ನಡುಗುತ್ತಿದ್ದಂತೆ ವೇದಿಕೆಯ ಡಯಾಸ್ ಅನ್ನು ಹಿಡಿದು, ಹಿಂದೆ-ಮುಂದೆ ತೂಗಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

ಚಲನಚಿತ್ರ ನಿರ್ಮಾಪಕಿ ನಿಕಿತಾ ಮಿಖೈಲೋವ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಪುಟಿನ್ ಅಸಹಜವಾಗಿ ವರ್ತಿಸಿದ್ದಾರೆ. ಭಾಷಣ ಮಾಡುವ ಸಂದರ್ಭ ಅಸ್ಥಿರವಾಗಿ ನಿಂತಿರುವ ವೀಡಿಯೋ ವೈರಲ್ ಆಗುತ್ತಿದ್ದು, ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಜಿಜ್ಞಾಸೆ ಉಂಟುಮಾಡಿದೆ.

ಕೆಲವು ದಿನಗಳ ಹಿಂದೆ ಪುಟಿನ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದು, ಅವರು ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿತ್ತು. ಪುಟಿನ್‌ಗೆ 69 ವರ್ಷ ಆಗಿದ್ದು, ಅವರ ಕಣ್ಣಿನ ದೃಷ್ಟಿಯೂ ಗಂಭೀರವಾಗಿ ಹದಗೆಟ್ಟಿದೆ ಹಾಗೂ ಬೆರಳುಗಳು ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿತ್ತು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

ಪುಟಿನ್ ಅವರ ಹದಗೆಡುತ್ತಿರುವ ಆರೋಗ್ಯದ ಕಾರಣ ವೈದ್ಯರು ಸಾರ್ವಜನಿಕವಾಗಿ ಹೆಚ್ಚು ಸಮಯ ಕಾಣಿಸಿಕೊಳ್ಳದಂತೆ ಹೇಳಿರುವುದಾಗಿ ತಿಳಿದುಬಂದಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *