ಸಿರಿಯಾ ಮಿಲಿಟರಿ ಹೆಡ್‌ಕ್ವಾಟ್ರಸ್‌ ಮೇಲೆ ಇಸ್ರೇಲ್ ದಾಳಿ – ಲೈವ್‌ನಿಂದಲೇ ಎದ್ದು ಓಡಿದ ಟಿವಿ ಆಂಕರ್

Public TV
2 Min Read

ಡಮಾಸ್ಕಸ್: ಸಿರಿಯಾ (Syria) ರಾಜಧಾನಿ ಡಮಾಸ್ಕಸ್‌ನ ನಗರದ ಮೇಲೆ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಗೆ (Israel Bombs Attack) ಬೆಚ್ಚಿ ಲೈವ್‌ ನೀಡುತ್ತಿದ್ದ ಟಿವಿ ನಿರೂಪಕಿ ಎದ್ದು ಓಡಿರುವ ದೃಶ್ಯ ಕಂಡುಬಂದಿದೆ.

ಹೌದು. ರಾಜಧಾನಿ ಡಮಾಸ್ಕಸ್‌ನಲ್ಲಿರುವ ಮಿಲಿಟರಿ ಹೆಡ್‌ಕ್ವಾಟ್ರಸ್‌ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ನಡೆಸಿದೆ. ಈ ವೇಳೆ ಬಾಂಬ್‌ ಬಿದ್ದ ಕಟ್ಟಡದ ಸುತ್ತ ದಟ್ಟ ಹೊಗೆ ಆವರಿಸಿದೆ. ಇತ್ತ ಬಾಂಬ್‌ ಶಬ್ಧ ಕೇಳುತ್ತಿದ್ದಂತೆ ಟಿವಿ ಆಂಕರ್‌ (TV Anchor) ಲೈವ್‌ನಿಂದಲೇ ಕಿರುಚಿಕೊಂಡು ಓಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ತೆಲಂಗಾಣ ಮಾಡೆಲ್ ಜಾತಿ ಜನಗಣತಿಗೆ ಕಾಂಗ್ರೆಸ್ ಮಣೆ- ಸಿದ್ದರಾಮಯ್ಯ ವರದಿ ಕಸದ ಬುಟ್ಟಿಗೆ: ಶಾಸಕ ಸುನಿಲ್ ಕುಮಾರ್ ವ್ಯಂಗ್ಯ

ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ (Social Media) ಖಾತೆಯಲ್ಲಿ ಸಂದೇಶವೊಂದನ್ನ ಹಂಚಿಕೊಂಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಸಿರಿಯಾದಲ್ಲಿ ಸಮುದಾಯವನ್ನ ರಕ್ಷಿಸುತ್ತೇವೆ. ಡಮಾಸ್ಕಸ್‌ಗೆ ನೀಡಬೇಕಿದ್ದ ಎಲ್ಲಾ ಎಚ್ಚರಿಕೆಗಳು ಮುಗಿದಿವೆ, ಇನ್ನೇನಿದ್ದರೂ ದಾಳಿಯಷ್ಟೇ ಎಂದಿದ್ದಾರೆ. ಅಲ್ಲದೇ ಸುವೈದಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯನಿರ್ವಹಿಸುವುದನ್ನ ಮುಂದುವರಿಸುತ್ತೆ. ಸರ್ಕಾರಿ ಪಡೆಗಳು ಈ ಪ್ರದೇಶದಿಂದ ಹಿಂದೆ ಸರಿಯುವವರೆಗೂ ದಾಳಿ ಮಾಡುವುದನ್ನು ಮುಂದುವರಿಸುತ್ತದೆ. ಮುಂದೆ ಪ್ರತೀಕಾರದ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು

ಏನಿದು ಘರ್ಷಣೆ?
ದಕ್ಷಿಣ ಸಿರಿಯಾದ ಸುವೈದಾದಲ್ಲಿ ಕಳೆದ ಕೆಲ ದಿನಗಳಿಂದ ಅಲ್ಪಸಂಖ್ಯಾತ ಡ್ರೂಜ್ ಸಮುದಾಯ ಮತ್ತು ಬೆಡೋಯಿನ್ ಬುಡಕಟ್ಟು ಜನಾಂಗದ ಸಶಸ್ತ್ರ ಗುಂಪುಗಳ ನಡುವೆ ನಿರಂತರ ಘರ್ಷಣೆಗಳು ನಡೆಯುತ್ತಿವೆ. ಈ ನಡುವೆ ಡ್ರೂಜ್‌ ಸಮುದಾಯದ ಪರವಾಗಿ ನಿಂತಿರುವ ಇಸ್ರೇಲ್‌, ಸಂಘರ್ಷ ತಡೆಯಲು ಸ್ವೀಡಾ ಪಟ್ಟಣಕ್ಕೆ ತನ್ನ ಸೈನ್ಯ ಕಳುಹಿಸಿತ್ತು. ಆದಾಗ್ಯೂ ಸಿರಿಯಾ ಸಮುದಾಯದ ಜೊತೆಗೆ ಘರ್ಷಣೆಗೆ ಇಳಿದಿತ್ತು. ಇದರಿಂದಾಗಿ ಮಧ್ಯ ಪ್ರವೇಶಿಸಿರುವ ಇಸ್ರೇಲ್‌ ಸಿರಿಯಾದ ಮಿಲಿಟರಿ ಕ್ವಾಟ್ರಸ್‌ ಮೇಲೆ ದಾಳಿ ನಡೆಸಿದೆ.

ಈ ವೇಳೆ ನೇರ ಪ್ರಸಾರದಲ್ಲಿ ಸುದ್ದಿ ನಿರೂಪಣೆ ಮಾಡುತ್ತಿದ್ದ ಟಿವಿ ನಿರೂಪಕಿ ಜೋರಾಗಿ ಕಿರುಚುತ್ತಲೇ ಎದ್ದು ಓಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತಷ್ಟು ಬಲ – ವಾಯುಪಡೆಗೆ 3 ಅಪಾಚೆ ಹೆಲಿಕಾಪ್ಟರ್‌, ಪಾಕ್ ಗಡಿಯಲ್ಲಿ ನಿಯೋಜನೆಗೆ ನಿರ್ಧಾರ

Share This Article