ಮಾರುತಿ ಸುಜುಕಿ (Maruthi Suzuki) ಕಂಪನಿಯ ಹೊಸ ಕಾರು ವಿಕ್ಟೋರಿಸ್ (Victoris) 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 33.32 ಅಂಕಗಳನ್ನು ಗಳಿಸುವ ಮೂಲಕ ವಿಕ್ಟೋರಿಸ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41 ಅಂಕಗಳನ್ನು ಪಡೆದು 5-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ.
ವಿಕ್ಟೋರಿಸ್ ಕಾರು 6-ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಲೆವಲ್ 2 ADAS ಸಿಸ್ಟಮ್, ಫ್ರಂಟ್ ಪಾರ್ಕಿಂಗ್ ಅಸಿಸ್ಟ್ ಸೆನ್ಸರ್, EBD ಜೊತೆ ABS, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಆಂಕರೇಜ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಮುಂತಾದ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
K15 ಎಂಜಿನ್ ಹೊಂದಿರುವ ಈ ಪೆಟ್ರೋಲ್ ಕಾರು 103.06 Ps ಶಕ್ತಿ ಮತ್ತು 139 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಜೊತೆ ಬರಲಿದೆ. M15D ಕೋಡ್ ಹೊಂದಿರುವ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲೂ ವಿಕ್ಟೋರಿಸ್ ಲಭ್ಯವಿದೆ. ಈ ಎಂಜಿನ್ 92.45 Ps ಶಕ್ತಿ ಮತ್ತು 122 Nm ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್+CNG ಎಂಜಿನ್ ಹೊಂದಿರುವ ಕಾರು ಪೆಟ್ರೋಲ್ ಆಯ್ಕೆಯಲ್ಲಿ 100.6 Ps ಶಕ್ತಿ ಉತ್ಪಾದಿಸಿದರೆ CNG ಆಯ್ಕೆಯಲ್ಲಿ 64.9 Ps ಶಕ್ತಿ ಉತ್ಪಾದಿಸುತ್ತದೆ. ವಿಕ್ಟೋರಿಸ್ 4 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು e-CVT ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಇದನ್ನೂ ಓದಿ: ಟೊಯೋಟಾ ಫಾರ್ಚುನರ್ ಬೆಲೆ 3.49 ಲಕ್ಷ ಇಳಿಕೆ; ಥಾರ್ ಬೆಲೆ 1.55 ಲಕ್ಷ ಕಡಿತ
LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಡೇ ಟೈಮ್ ರನ್ನಿಂಗ್ ಲೈಟ್‌ಗಳು, LED ಫಾಗ್ ಲ್ಯಾಂಪ್‌ಗಳು, 17 ಇಂಚಿನ ಅಲಾಯ್ ವೀಲ್ಸ್, ಒಳಾಂಗಣದಲ್ಲಿ 64 ಕಲರ್ ಹೊಂದಿರುವ ಆಂಬಿಯಂಟ್ ಲೈಟಿಂಗ್, ಲೆದರೇಟ್ ಸೀಟ್‌ಗಳು, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾನರೋಮಿಕ್ ಸನ್‌ರೂಫ್, 10.1 ಇಂಚಿನ ಸ್ಮಾರ್ಟ್ ಪ್ಲೇ ಪ್ರೋ X HD ಟಚ್‌ಸ್ಕ್ರೀನ್ ಸಿಸ್ಟಮ್, ಮುಂತಾದ ವೈಶಿಷ್ಟ್ಯಗಳು ವಿಕ್ಟೋರಿಸ್ ಕಾರಿನಲ್ಲಿವೆ.
ಈ ಕಾರು ಪೆಟ್ರೋಲ್ ಅವತರಣಿಕೆಯಲ್ಲಿ ಪ್ರತಿ ಲೀಟರ್‌ಗೆ 21.18 ಕಿಲೋಮೀಟರ್ ಮೈಲೇಜ್ ನೀಡಿದರೆ, ಹೈಬ್ರಿಡ್ ಅವತರಣಿಕೆಯಲ್ಲಿ 28.32 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಪ್ರತಿ ಕೆಜಿ CNGಗೆ 27.02 ಕಿಲೋಮೀಟರ್ ಮೈಲೇಜ್ ವಿಕ್ಟೋರಿಸ್ ನೀಡುತ್ತದೆ ಎಂದು ಕಂಪನಿ ಘೋಷಿಸಿಕೊಂಡಿದೆ. 7 ಅತ್ಯಾಕರ್ಷಕ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. ವಿಕ್ಟೋರಿಸ್ ಕಾರಿನ ಬೆಲೆ 10.49 ಲಕ್ಷದಿಂದ ಆರಂಭವಾಗಿದೆ 19.98 ಲಕ್ಷ ರೂ.ವರೆಗೆ ನಿಗದಿಯಾಗಿದೆ.