ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಪುತ್ರ ಪ್ರತೀಕ್ ಚೌಹಾಣ್ (Pratheek Chauhan) ಬಹಳಷ್ಟು ಹುಡುಗಿಯರ ಜೊತೆ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಮಾಡಿದ್ದಾನೆ ಎಂದು ಸಂತ್ರಸ್ತೆಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯರ, ಕುಟುಂಬಸ್ಥರು, ವಕೀಲರು ಸಮ್ಮುಖದಲ್ಲಿ ಯಾವುದೇ ಇತ್ಯರ್ಥವಾಗಿಲ್ಲ. ಏನು ಮಾತುಕತೆಯಾಗಿದೆ ಎಂದು ಸಿಡಿಆರ್ ತೆಗೆಯರಿ. 5 ರಂದು ಮದುವೆಗೆ ದಿನಾಂಕ ನಿಗದಿ ಮಾಡಿ ಎಂದು ಕೇಳಲು ಮನೆಗೆ ಹೋಗಿದ್ದೆವು. ಆಗ ನಮ್ಮ ಮೇಲೆ ಅವರು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಹೆದರಿಸಿದ್ರು ಎಂದು ದೂರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು
ಬಳಿಕ ಸಂತ್ರಸ್ತೆ ತಾಯಿ ಮಾತನಾಡಿ, ಎಲ್ಲಾ ದಾಖಲೆಗಳು ನಮ್ಮ ಬಳಿ ಇದ್ದು, ಪೊಲೀಸರಿಗೆ ನೀಡಿದಲಾಗಿದೆ. ಪ್ರತೀಕ್ ಚೌಹಾಣ್ ಸುಳ್ಳು ಹೇಳುತ್ತಿದ್ದಾರೆ. ಮದುವೆ ಮಾಡುತ್ತೀರಾ ಎಂದು ಕೇಳಿದಾಗ ನಿರಾಕರಣೆ ಮಾಡಿದ್ರು. ನಾವು ಬಹಳಷ್ಟು ದಿನ ಕಾದಿದ್ದೇವೆ. ಆದರೆ ಅವರೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಮತ್ತೆ ನನ್ನನ್ನ ಬಿಜೆಪಿಗೆ ಸೇರಿಸಿಕೊಳ್ತಾರೆ: ಯತ್ನಾಳ್
ಸಂತ್ರಸ್ತ ಯುವತಿ ಪ್ರತಿಕ್ರಿಯಿಸಿ, ನನಗೆ ನ್ಯಾಯ ಬೇಕು, ನನ್ನ ಜೊತೆ ಆಗಿದ್ದು ಬೇರೆ ಯುವತಿಗೆ ಆಗಬಾರದು. ನನಗೆ ಯಾರೂ ಬಾಯ್‌ಫ್ರೆಂಡ್ ಇಲ್ಲ. ಅವರು ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾರ ಜೊತೆಗೂ ಚಾಟಿಂಗ್, ವೀಡಿಯೋ ಕಾಲ್ ಅಲ್ಲಿ ಮಾತಾಡಿಲ್ಲ. ನನ್ನ ಹಾಗೂ ಪ್ರತೀಕ್ ನಡುವೆ ಪ್ರೀತಿ ಇತ್ತು. 4 ತಿಂಗಳು ನನ್ನ ಫೋನ್ ಪ್ರತೀಕ್ ಚೌಹಾಣ್ ಬಳಿಯೇ ಇತ್ತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ
ನಾನು ಪ್ರತೀಕ್ ಬಿಟ್ಟು ಬೇರೆ ಯುವಕನನ್ನು ಪ್ರೀತಿ ಮಾಡಿಲ್ಲ. ಪ್ರತೀಕ್ ತಪ್ಪು ಮಾಡಿಲ್ಲ ಅಂದರೆ ಏಕೆ ಮುಂದೆ ಬರುತ್ತಿಲ್ಲ, ಅವರ ತಂದೆ ಯಾಕೆ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಕೈ ಕಟ್ ಮಾಡಿದ ವಿಡಿಯೋ ಕೂಡಾ ಬಿಡುಗಡೆ ಮಾಡಿದ ಸಂತ್ರಸ್ತೆ, ನೀನು ನನ್ನ ಎಷ್ಟು ಪ್ರೀತಿ ನೋಡೋಣ ಎಂದು ಚೌಹಾಣ್ ಪುತ್ರ ಬ್ಲೇಡ್‌ನಿಂದ ನನ್ನ ಕೈ ಕಟ್ ಮಾಡಿ ಓಡಿ ಹೋಗಿದ್ದಾನೆ. ಪ್ರಭು ಚೌಹಾಣ್, ಇದು ಭಗವಂತ್ ಖೂಬಾ ಪಿತೂರಿ ಎಂದು ಹೇಳಿದ್ದಾರೆ. ನಾನು ಇಲ್ಲಿಯವರೆಗೆ ಖೂಬಾರನ್ನು ನೋಡಿಲ್ಲ. ನಾಗಲಕ್ಷ್ಮಿ ಹಾಗೂ ಎಸ್ಪಿಗೆ ದೂರು ನೀಡಿ ಎಲ್ಲಾ ಹೇಳಿದ್ದು, ನನಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.