ಕೈಗೆ ಪೆಟ್ಟು ಮಾಡಿಕೊಂಡಿದ್ದ ವಿಕ್ಕಿ ಕೌಶಲ್ ಆರೋಗ್ಯ ಹೇಗಿದೆ?

By
1 Min Read

ಬಾಲಿವುಡ್ ನಟ ವಿಕ್ಕಿ ಕೌಶಲ್‌ಗೆ (Vicky Kaushal) ಕೆಲವು ದಿನಗಳ ಹಿಂದೆ ಶೂಟಿಂಗ್ ಮಾಡುವಾಗ ಕೈಗೆ ಪೆಟ್ಟಾಗಿತ್ತು. ವಿಕ್ಕಿ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಫ್ಯಾನ್ಸ್‌ ಆತಂಕದಲ್ಲಿದ್ದರು. ಇದೀಗ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ವಿಕ್ಕಿ ಕೌಶಲ್ ಗುಣಮುಖರಾಗಿದ್ದಾರೆ. ಮತ್ತೆ ‘ಚಾವಾ’ (Chhaava) ಸಿನಿಮಾ ಶೂಟಿಂಗ್‌ಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ.

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಚಾವಾ’ ಸಿನಿಮಾ ಐತಿಹಾಸಿಕ ಚಿತ್ರವಾಗಿದ್ದು, ರಿಸ್ಕಿ ಸ್ಟಂಟ್ ಮಾಡುವಾಗ ಎಡಗೈಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಚಿತ್ರೀಕರಣ ಸ್ಥಗಿತಗೊಳಿಸಿ ವಿಕ್ಕಿರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಫೆಬ್ರವರಿ ಮೊದಲ ವಾರದಲ್ಲಿ ನಡೆದಿತ್ತು. ಇದೀಗ ಸೂಕ್ತ ಚಿಕಿತ್ಸೆ ಪಡೆದು ವಿಕ್ಕಿ ಕೌಶಲ್ ಚೇತರಿಸಿಕೊಂಡಿದ್ದಾರೆ. ಮಾರ್ಚ್ 9ರಿಂದ ಮತ್ತೆ ‘ಚಾವಾ’ ಶೂಟಿಂಗ್ ಶುರುವಾಗಲಿದ್ದು, ವಿಕ್ಕಿ ಚಿತ್ರೀಕರಣಕ್ಕೆ ಭಾಗಿಯಾಗಲಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ ಕಥೆ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna) ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್’ ಸಕ್ಸಸ್ ನಂತರ ಚಾವಾಗೆ ಸಾಥ್ ನೀಡಿರೋ ರಶ್ಮಿಕಾಗೆ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಇದನ್ನೂ ಓದಿ:ಖ್ಯಾತ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ

ಮೊದಲ ಬಾರಿಗೆ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಯಿದೆ. ಕೆರಿಯರ್‌ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಾತ್ರವೊಂದರಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ವಿಕ್ಕಿ, ರಶ್ಮಿಕಾ ಜೋಡಿ ಕ್ಲಿಕ್ ಆಗುತ್ತಾ ಕಾಯಬೇಕಿದೆ.

Share This Article