ಖ್ಯಾತ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಇನ್ನಿಲ್ಲ

Public TV
1 Min Read

ಕಲಬುರಗಿ: ಖ್ಯಾತ ಬಂಡಾಯ ಸಾಹಿತಿ ಮತ್ತು ಕನ್ನಡ ಸಾರಸತ್ವ ಲೋಕದ ಬರಹಗಾರ ಡಾ.ಚೆನ್ನಣ್ಣ ವಾಲೀಕಾರ(78) ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 11 ರಿಂದ 12 ಗಂಟೆವರೆಗೆ ಕಲಬುರಗಿಯ ಹಿಂದಿ ಪ್ರಚಾರ ಸಭೆ ಆವರಣದಲ್ಲಿ ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಅವರ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಳೆದ 9 ತಿಂಗಳಿಂದ ಕಾಮಾಲೆ ಮತ್ತು ಪಿತ್ತಜನಕಾಂಗ(ಲಿವರ್) ಸಮಸ್ಯೆಯಿಂದ ವಾಲೀಕಾರ ಅವರು ಬಳಲುತ್ತಿದ್ದರು. ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿ ಭಾನುವಾರ ರಾತ್ರಿ ಮನೆಗೆ ವಾಪಸ್ ಕರೆತರಲಾಗಿತ್ತು. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಮನೆಯಲ್ಲಿಯೇ ವಾಲೀಕಾರ ಅವರು ಕಣ್ಮುಚ್ಚಿದ್ದಾರೆ. ಪತ್ನಿ, ಶಿಷ್ಯರು, ಬಂಧು-ಬಳಗ ಸೇರಿ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ ಎಂದು ಕೇಳುತ್ತಲೇ ವಾಲೀಕಾರ್ ಅವರು ದಲಿತರ, ಶೋಷಿತರ ನೋವಿನ ಮೂಕ ವೇದನೆಗೆ ಗಟ್ಟಿಧ್ವನಿಯಾಗಿ ನಿಂತಿದ್ದರು. ವಾಲೀಕಾರ್ ಅವರು ನಾಟಕ ವಿಮರ್ಶೆ, ಕಾದಂಬರಿ ಕಥೆ ಸೇರಿದಂತೆ ಸಾಹಿತ್ಯ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ ಮಹಾನ್ ಸಾಹಿತಿ ಎನಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *