ಜನಪ್ರಿಯ ಪಂಜಾಬಿ ಹಾಸ್ಯನಟ ಜಸ್ವಿಂದರ್ ಭಲ್ಲಾ ನಿಧನ

Public TV
1 Min Read

ಪಾಟ್ನಾ: ಜನಪ್ರಿಯ ಪಂಜಾಬಿ ನಟ-ಹಾಸ್ಯನಟ ಜಸ್ವಿಂದರ್ ಭಲ್ಲಾ (Jaswinder Bhalla) (65) ಅವರಿಂದು ಬೆಳಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.

ಆಗಸ್ಟ್ 23 ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತಿಮ ನಮನ ಸಲ್ಲಿಸಲು ಅಭಿಮಾನಿಗಳು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಇದನ್ನೂ ಓದಿ: ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳ ಸೆರೆ

ವರದಿಗಳ ಪ್ರಕಾರ, ಭಲ್ಲಾ ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಅಂತ ತಿಳಿದುಬಂದಿದೆ. ಸದ್ಯ ಭಲ್ಲಾ ಸಾವಿನ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಆಘಾತಕ್ಕೆ ದೂಡಿದೆ. ಇದನ್ನೂ ಓದಿ: ಕನ್ನಡಕ್ಕೆ ಅಜಯ್ ದೇವಗನ್ – ಜೆಪಿ ತುಮಿನಾಡ್‌ ಸಿನಿಮಾದಲ್ಲಿ ಅಭಿನಯ!

ಜನಪ್ರಿಯ ಹಾಸ್ಯ ನಟನಾಗಿದ್ದ ಭಲ್ಲಾ ಜನರ ಮನಸ್ಸಿನಲ್ಲಿ ನೆಲೆಯೂರಿದ್ದರು. ‘ಗಡ್ಡಿ ಚಲದೀ ಹೈ ಚಲ್ಲಾ ಮಾರ್ಕೆ’, ‘ಕ್ಯಾರಿ ಆನ್ ಜಟ್ಟಾ’, ‘ಜಿಂದ್ ಜಾನ್’ ಮತ್ತು ‘ಬ್ಯಾಂಡ್ ಬಾಜೆ’ ಅವರು ಅಭಿನಯಿಸಿದ ಸ್ಮರಣೀಯ ಚಿತ್ರಗಳಾಗಿವೆ. ಇದನ್ನೂ ಓದಿ: ಪ್ರಶಾಂತ್ ನೀಲ್ ವಿಸ್ಮಯ ಲೋಕ – 15 ಕೋಟಿ ವೆಚ್ಚದ ಸೆಟ್

Share This Article