ತಿರುವನಂತಪುರಂ: ಕಳೆದ ಒಂದು ತಿಂಗಳಿನಿಂದ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಕೆರಳದ (Kerala) ಹಿರಿಯ ಕಾಂಗ್ರೆಸ್ (Congress) ನಾಯಕ ಪಿ.ಪಿ. ತಂಕಚನ್ (PP Thankachan) (86) ನಿಧನರಾಗಿದ್ದಾರೆ. ಗುರುವಾರ (ಸೆ.11) ಸಂಜೆ 4:30 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ತಂಕಚನ್ ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ರಾಜ್ಯದಲ್ಲಿ ಪಕ್ಷ ಮತ್ತು ಮೈತ್ರಿಕೂಟದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್ ಹಿಂದುತ್ವ – ಸಿಟಿ ರವಿ
1939 ಜುಲೈ 29 ರಂದು ಅಂಗಮಲಿಯಲ್ಲಿ ಜನಿಸಿದ ಅವರು ಯುವಕರಾಗಿದ್ದಾಗಲೇ ರಾಜಕೀಯವನ್ನು ಪ್ರವೇಶಿಸಿದರು. 26ನೇ ವಯಸ್ಸಿನಲ್ಲಿ ಪೆರುಂಬವೂರು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1982 ರಲ್ಲಿ ಪೆರುಂಬವೂರಿನಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದರು. 2001 ರವರೆಗೆ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1987 ಮತ್ತು 1991 ರ ನಡುವೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು. ಮೇ 1995 ರಿಂದ 1996 ರವರೆಗೆ ರಾಜ್ಯದ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004 ರಲ್ಲಿ, ಅವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿದ್ದರು. ಅವರು ಪತ್ನಿ ಟಿ ವಿ ತಂಕಮ್ಮ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ತಂಕಚನ್ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಮಾಡಿ ಅಂತಾ ಶಿಫಾರಸು ಮಾಡ್ತೇನೆ: ರಿಜ್ವಾನ್ ಅರ್ಷದ್