ಶಿಸ್ತು, ಜವಾಬ್ದಾರಿ ಇರಬೇಕು – ಅರೆ ಬೆತ್ತಲೆ ಪ್ರತಿಭಟನೆಯನ್ನು ಖಂಡಿಸಿದ ಕೈ ನಾಯಕಿ ಮಾರ್ಗರೇಟ್‌ ಆಳ್ವ

2 Min Read

ಬೆಂಗಳೂರು: ದೆಹಲಿಯ ಭಾರತ್‌ ಮಂಟಪದಲ್ಲಿ(Bharat Mandapam) ನಡೆದ ಎಐ (AI) ಜಾಗತಿಕ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ (Youth Congress) ಕಾರ್ಯಕರ್ತರ ಅರೆಬೆತ್ತಲೆ ಪ್ರತಿಭಟನೆಯನ್ನು ಹಿರಿಯ ಕಾಗ್ರೆಸ್‌ ನಾಯಕಿ ಮಾರ್ಗರೇಟ್‌ ಆಳ್ವ (Margaret Alva) ಖಂಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಅತ್ಯಂತ ಮುಖ್ಯ. ಇಂಡಿಯಾ ಎಐ ಶೃಂಗಸಭೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಘನತೆ, ಶಿಸ್ತು ಮತ್ತು ಜವಾಬ್ದಾರಿ ಇರಬೇಕು ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈಗಾಗಲೇ ದೇಶದ ಮುಂದೆ ಬೆತ್ತಲಾಗಿರುವ ನೀವು ಬಟ್ಟೆ ಬಿಚ್ಚಿದ್ದು ಯಾಕೆ: ಕಾಂಗ್ರೆಸ್‌ಗೆ ತಿವಿದ ಮೋದಿ

ಪಕ್ಷದ ವಿರುದ್ಧವೇ ಮಾಡಿದ ಟೀಕೆ ದೊಡ್ಡ ಸುದ್ದಿಯಾಗುತ್ತಿದ್ದಂತೆ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿಗಿಂತ ಭಿನ್ನವಾಗಿ ಕಾಂಗ್ರೆಸ್ ಪಕ್ಷವು ಯಾವಾಗಲೂ ವೈವಿಧ್ಯಮಯ ದೃಷ್ಟಿಕೋನಗಳು, ಭಿನ್ನಾಭಿಪ್ರಾಯ ಮತ್ತು ಸಕಾರಾತ್ಮಕ ಟೀಕೆಗಳನ್ನು ಅನುಮತಿಸಿದೆ ಮತ್ತು ಸ್ವಾಗತಿಸಿದೆ. ಎಐ ಸಮ್ಮೇಳನದಲ್ಲಿ ನಡೆದ ಪ್ರತಿಭಟನೆಯ ಕುರಿತು ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಸಿದ್ಧಾಂತದ ಬಗೆಗಿನ ನನ್ನ ಅಚಲ ಬದ್ಧತೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಬರೆದಿದ್ದಾರೆ.  ಇದನ್ನೂ ಓದಿ: ಎಐ ಶೃಂಗದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಾಲಿನಿಂದ ಒದ್ದ ವೀಕ್ಷಕರು


ಫೆ. 20 ರಂದು ಕಾರ್ಯಕ್ರಮ ವೀಕ್ಷಣೆಯ ಪಾಸ್‌ ಪಡೆದು ಸಭಾಂಗಣ ಪ್ರವೇಶಿಸಿದ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಶರ್ಟ್‌ ತೆಗೆದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಅಮೆರಿಕದ (USA) ವಿರುದ್ಧ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಮೋದಿ (Narendra Modi) ದೇಶವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

Share This Article