ಮಗನ ವಿರುದ್ಧ ದೂರು ನೀಡಿದ ಹಿರಿಯ ನಟಿ ಶ್ಯಾಮಲಾದೇವಿ

Public TV
1 Min Read

ನ್ನಡ ಸಿನಿಮಾ ರಂಗದ ಹಿರಿಯ ನಟಿ (Actress) ಶ್ಯಾಮಲಾದೇವಿ (Shyamala Devi) ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ಪೊಲೀಸ್ ಠಾಣೆ (Police Station) ಮೆಟ್ಟಿಲು ಏರಿದ್ದಾರೆ. ಶ್ಯಾಮಲಾದೇವಿ ಅದೆಷ್ಟೋ ಚಲನಚಿತ್ರಗಳಲ್ಲಿ ನಟಿಸಿದ್ದ ಕಲಾವಿದೆ. ಸುಖ ದುಖಃದ ಪಾತ್ರಕ್ಕೆ ಜೀವ ತುಂಬಿದ ನಟಿಯೇ ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆಯ ಮುಂದೆ ನಿಲ್ಲುವಂತೆ ಆಗಿದೆ. ಇದಕ್ಕೆ ಕಾರಣವಾಗಿದ್ದು ಮಾತ್ರ ತಾನೇ ಜನ್ಮ ಕೊಟ್ಟ ಮಗ.

ಸಾಕಷ್ಟು ಕನ್ನಡದ ಚಲನಚಿತ್ರದಲ್ಲಿ ನಟಿಸಿರೋ ಶ್ಯಾಮಲಾದೇವಿ ಇವತ್ತು ಕಣ್ಣೀರು ಹಾಕುತ್ತಾ ಬೀದಿಯಲ್ಲಿ ನಿಂತಿದ್ದಾರೆ. ಮಗ ನಿತೀನ್ ಮತ್ತು ಸೊಸೆ ಸ್ಮಿತಾ ಅವರೇ ಇವರ ಕಣ್ಣೀರಿಗೆ ಕಾರಣ ಆಗಿದ್ದಾರೆ. ಚಂದ್ರಲೇಔಟ್ ನ ಬಳಿ ಅಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ಮಗನ ಜೊತೆಯಲ್ಲಿ ಶ್ಯಾಮಲಾದೇವಿ ವಾಸವಾಗಿದ್ದಾರೆ. ಶ್ಯಾಮಲಾದೇವಿಗೆ ವಯಸ್ಸಾಗಿರೋದ್ರಿಂದ ಮಗ ನಿತೀನ್ ಮತ್ತು ಸೊಸೆ ಇಬ್ಬರೂ ಮನೆಯಿಂದ ಹೊರಗೆ ಹಾಕೋದಕ್ಕೆ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

ತಾಯಿ ಅನ್ನುವುದನ್ನೂ ಲೆಕ್ಕಿಸದೇ ಈ ಹಿರಿಯ ನಟಿಗೆ ಕೆಟ್ಟ ಕೆಟ್ಟ ಪದಗಳಿಂದ ಮಾತನಾಡೊದು, ಬೇಕಂತಲೇ ಹಿಂಸೆಯನ್ನು ಕೊಡೋದು ಮಾಡುತ್ತಾ ಇದ್ದಾರಂತೆ ಅಲ್ಲದೇ, ಕೈಗೆ ಸಿಕ್ಕ ವಸ್ತುಗಳಿಂದ ಶ್ಯಾಮಲಾದೇವಿಯ ಮೇಲೆ ಹಲ್ಲೆ ಮಾಡಿದ್ದಾರಂತೆ. ಮನೆಯಿಂದ ಹೊರಗೆ ಹಾಕೋದಕ್ಕಾಗಿಯೇ ಸರಿಯಾಗಿ ಮನೆಯಲ್ಲಿ ಊಟವನ್ನು ಹಾಕುತ್ತಾ ಇಲ್ಲ, ನನ್ನ ಊಟವನ್ನು ನಾನೇ ಮಾಡಿಕೊಂಡರೂ ಹಿಂಸೆ ಕೊಡ್ತಾ ಇದ್ದಾರೆ ಅಂತ ಬಸವನಗುಡಿ ಪೊಲೀಸ್ ಠಾಣೆಗೆ ಮಗ ಹಾಗೂ ಸೊಸೆ ಮೇಲೆ ದೂರು ನೀಡಿದ್ದಾರೆ ಶ್ಯಾಮಲಾ ದೇವಿ.

ಈ ಹಿಂದೆಯೂ ಶ್ಯಾಮಲಾದೇವಿ ಅವರು ಮಗ ಹಾಗೂ ಸೊಸೆಯ ವಿರುದ್ಧ ಹಿರಿಯ ನಾಗರೀಕರ ವೇದಿಕೆಗೆ ದೂರು ನೀಡಿದ್ದರು. ಆಗ ಮಗ ಮತ್ತು ಸೊಸೆ ತಪ್ಪೊಪ್ಪಿಕೊಂಡು ಮತ್ತೆ ತಾಯಿಯೊಂದಿಗೆ ವಾಸಿಸುತ್ತಿದ್ದರು. ಇದೀಗ ಮತ್ತೆ ತಾಯಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

Share This Article