ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

Public TV
2 Min Read

ಹೆಡ್ಡಿಂಗ್ ನೋಡಿದ್ಮೇಲೆ ಹಿರಿಯ ನಟ ಅವಿನಾಶ್ (Avinash) ಯಾವಾಗ ಖಾದಿ ತೊಟ್ಟು ಕಣಕ್ಕಿಳಿದಿದ್ದರು? ಯಾರ ವಿರುದ್ದ ಸ್ಪರ್ಧೆ ಮಾಡಿದ್ದರು? ನಮಗೆ ಗೊತ್ತಿಲ್ಲದೇ ಅದ್ಯಾವಾಗ ಪಶ್ವಿಮ ಘಟ್ಟದ ಸ್ಥಳೀಯ ಎಂಎಲ್ಎ (MLA) ಸ್ಥಾನಕ್ಕೇರಿದರು ? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಒಮ್ಮೆಲೆ ದಾಂಗುಡಿ ಇಡುವುದು ಸಹಜ. ಆ ಪ್ರಶ್ನೆಗೆ ಉತ್ತರಿಸಬೇಕು ಅಂದರೆ ಅಸಲಿಯತ್ತು ಹರವಿಡಬೇಕು. ರಿಯಲ್ ಅಲ್ಲ ರೀಲ್ ಎನ್ನುವ ಸತ್ಯ ಒಪ್ಪಿಕೊಳ್ಳಬೇಕು

ರೀಲ್ ಲೈಫ್ ನಲ್ಲಿ ಅಂದರೆ ಸಿನಿಮಾಗಳಲ್ಲಿ ಸಾಕಷ್ಟು ಭಾರಿ ಎಂಎಲ್ಎ ಆಗಿದ್ದಾರೆ. ಸದ್ಯ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ನಿರ್ದೇಶಿಸಿರುವ ಇನಾಮ್ದಾರ್ (Inamdar) ಚಿತ್ರದಲ್ಲಿ   ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಸುಕುಮಾರ್ ಪಾತ್ರ ನಿರ್ವಹಿಸಿದ್ದಾರೆ.ಇದೊಂದು ಕ್ಲೀನ್ ಹ್ಯಾಂಡ್ ಎಂಎಲ್ಎ ಪಾತ್ರವಾಗಿದ್ದು ಖುದ್ದು ಅವಿನಾಶ್ ಅವರೇ ತಮ್ಮ ರೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ.  ಅಭಯಾರಣ್ಯದಲ್ಲಿ  ವಾಮಮಾರ್ಗದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಹ ಕ್ಯಾರೆಕ್ಟರ್ ಅವ್ರದ್ದು ಎಂದು ಹೇಳುವ ನಿರ್ದೇಶಕರು, ಥ್ರಿಲ್ಲರ್ ಮಂಜು ಸರ್ ಹಾಗೂ ಅವಿನಾಶ್ ಸರ್ ಮುಖಾಮುಖಿಯಾಗುವ ಸೀಕ್ವೆನ್ಸ್ ಹಾಗೂ ಡೈಲಾಗ್ಸ್ ಪ್ರೇಕ್ಷಕರಿಗೆ ವಾವ್ ಫೀಲ್ ಕೊಡುತ್ತೆ ಎಂದಿದ್ದಾರೆ.

ಡಾ. ರಾಜ್ ಕುಮಾರ್, ರಜನಿಕಾಂತ್, ವಿಷ್ಣುವರ್ಧನ್ ರಂತಹ ಲೆಜೆಂಡರಿ ಆ್ಯಕ್ಟರ್ ಗಳಿಂದ ಹಿಡಿದು ಈಗೀನ ಬಡ್ಡಿಂಗ್ ಆರ್ಟಿಸ್ಟ್ ಗಳ ತನಕ ಎಲ್ಲರ ಸಿನಿಮಾಗಳಲ್ಲೂ ನಟ ಅವಿನಾಶ್ ಅವರು ಮೇಜರ್ ರೋಲ್ ಪ್ಲೇ ಮಾಡುತ್ತಾ ಬರುತ್ತಿದ್ದಾರೆ. ನಾನಾ ತರಹದ ಪಾತ್ರಗಳಿಗೆ ಜೀವತುಂಬಿ ವರ್ಸಟೈಲ್ ಆ್ಯಕ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  3 ದಶಕಗಳಿಂದ ಮಾಯಾಲೋಕದಲ್ಲಿ ಸಕ್ರಿಯರಾಗಿರೋ ಮೈಸೂರಿನ ಹೀರೋ, ಇವತ್ತಿಗೂ ಡಿಮ್ಯಾಂಡ್ ಕಳೆದುಕೊಳ್ಳದೇ ಪೋಷಕ ನಟನಾಗಿ ಬ್ಯುಸಿಯಾಗಿದ್ದಾರೆ. ಕನ್ನಡ ,ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈಗ ಇನಾಮ್ದಾರ್ ಹೆಸರಿನ ಸಿನಿಮಾದಲ್ಲಿ ಎಂಎಲ್ಎ ಸುಕುಮಾರ್ ಆಗಿ ನಿಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ

ಇನಾಮ್ದಾರ್ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆಯ ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥೆಯುಳ್ಳ ಸಿನಿಮಾ. ಬೆಳಗಾವಿ, ಕುಂದಾಪುರ, ಚಿಕ್ಕಮಗಳೂರು ಒಳಗೊಂಡಂತೆ ಬಹುತೇಕ ಚಿತ್ರೀಕರಣ ನಡೆದಿರುವುದು ಕಾಡಲ್ಲೇ. ಕರಡಿ ಗುಡ್ಡ,  ನಾಗನಕಲ್ಲು ಬರೆ, ಮುದೂರು, ಬೆಳಕಲ್ಲು ಆಸುಪಾಸಿಲ್ಲಿ ಶೂಟಿಂಗ್ ಮಾಡಿದ್ದು ಚಿತ್ರತಂಡಕ್ಕೆ ಸವಾಲ್ ಆಗಿತ್ತು. ಆದರೆ, ಎಲ್ಲವೂ ಸುಸೂತ್ರವಾಗಿ ಸಾಗೋದಕ್ಕೆ ಹಿರಿಯ ಕಲಾವಿದರಾದ ಅವಿನಾಶ್ ಕೂಡ ಸಾಥ್ ಕೊಟ್ಟರು. ಹೊಸ ತಂಡವಾದರೂ ಸಿನಿಮಾ ಮೇಲಿರುವ ಬದ್ದತೆ ಹಾಗೂ ಪ್ಯಾಷನ್ ನೋಡಿ ಇನಾಮ್ದಾರ್ ಗೆ ಬೆಂಬಲವಾಗಿ ನಿಂತರು. ಫೈನಲೀ ಶೂಟಿಂಗ್ ಕಂಪ್ಲೀಟ್ ಆಗಿದೆ, ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು ಇದೇ ಅಕ್ಟೋಬರ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ಈ ಸಿನಿಮಾದಲ್ಲಿ ವರ್ಸಟೈಲ್ ಆ್ಯಕ್ಟರ್ ಅವಿನಾಶ್ ಜೊತೆಗೆ ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಿರಿಯ ಪ್ರತಿಭಾನ್ವಿತ ಕಲಾವಿದರ ಸಮಾಗಮವೂ ಆಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್