ಭಾರತದಲ್ಲಿ ಮೂರನೇ ಅಲೆ ಸಾಧ್ಯತೆ ಕಡಿಮೆ: ಗುಲೇರಿಯಾ

Public TV
1 Min Read

ನವದೆಹಲಿ: ಕೋವಿಡ್-19 ರೋಗ ಸದ್ಯ ಸ್ಥಳೀಯವಾಗಿ ಇದ್ದರೂ ಹಿಂದಿನಂತೆ ತೀವ್ರರೂಪದಲ್ಲಿ ಇಲ್ಲ. ಮುಂದೆ ಬರಲಿರುವ ಮೂರನೇ ಅಲೆಯೂ ತೀವ್ರ ಸ್ವರೂಪ ತಾಳುವ ಸಾಧ್ಯತೆ ಕಡಿಮೆ ಇದೆ. ದೇಶಾದ್ಯಂತ ಜನರಿಗೆ ನೀಡುತ್ತಿರುವ ಲಸಿಕೆಗಳು ಉತ್ತಮವಾಗಿದೆ. ಹೀಗಾಗಿ ಬೂಸ್ಟರ್ ಡೋಸ್ ನೀಡುವ ಅಗತ್ಯ ಭಾರತದ ಜನರಿಗೆ ಇಲ್ಲ ಎಂದು ಪ್ರಮುಖ ವೈದ್ಯಕೀಯ ತಜ್ಞ ಹಾಗೂ ಏಮ್ಸ್‍ನ ಮುಖ್ಯಸ್ಥ ರಣದೀಪ್ ಗುಲೇರಿಯಾ ಭವಿಷ್ಯ ನುಡಿದಿದ್ದಾರೆ.

ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್ ಬರೆದ ರೂಪಾ ಪ್ರಕಟಣೆಯ ‘ಗೋಯಿಂಗ್ ವೈರಲ್’ ಬಿಡುಗಡೆ ಕಾರ್ಯಕ್ರಮದಲ್ಲಿ ಗುಲೇರಿಯಾ ಹೇಳಿಕೆ ನೀಡಿದರು. ಇದನ್ನೂ ಓದಿ: ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ

ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯಕ್ರಮವು ಈಗಾಗಲೇ ರೋಗ ಮತ್ತು ಸಾವುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬೃಹತ್ ರೂಪದಲ್ಲಿ ಕೋವಿಡ್‍ನ ಮೂರನೇ ಅಲೆ ಮರುಕಳಿಸುವ ಸಾಧ್ಯತೆ ವಿರಳ. ಇದು ಹಂದಿ ಜ್ವರ (ಹೆಚ್1ಎನ್1) ನಂತೆ ಆಗುವ ಸಾಧ್ಯತೆ ಇರುತ್ತದೆ. ಜನರು ರೋಗಕ್ಕೆ ಒಳಗಾದರೂ ತೀವ್ರ ಪ್ರಮಾಣದಲ್ಲಿ ಅದು ಇರುವುದಿಲ್ಲ ಎಂದು ಗುಲೇರಿಯಾ ಹೇಳಿದರು.

ಕೋವಿಡ್-19 ಲಸಿಕೆಗಳನ್ನು ದೇಶಾದ್ಯಂತ ಜನರಿಗೆ ನೀಡುತ್ತಿರುವುದರಿಂದ ನಾವು ಪ್ರಗತಿಯಲ್ಲಿರುವ ಸೋಂಕುಗಳನ್ನು ಕಡಿಮೆಯಾಗಿ ನೋಡುತ್ತಿದ್ದೇವೆ. ಮೊದಲ ಡೋಸ್ ಅನ್ನು ಹೆಚ್ಚಿನ ಜನರು ತೆಗೆದುಕೊಂಡಿದ್ದಾರೆ. ಈಗ ಎರಡನೇ ಡೋಸ್‍ಅನ್ನು ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಬೇಕು. ಹೀಗೆ ಮಾಡಿದ್ದಲ್ಲಿ ಬೂಸ್ಟರ್ ಡೋಸ್‍ನ ಅಗತ್ಯವೇ ಬೀಳುವುದಿಲ್ಲ ಎಂದರು. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?

CORONA-VIRUS.

ನಾವು ನೋಡಿದ ಕೊನೆಯ ಸಾಂಕ್ರಾಮಿಕ ರೋಗ ಅದು 2009ರಲ್ಲಿ ಕಾಡಿದ ಹೆಚ್1ಎನ್1. ಆಗ ನಮ್ಮ ಬಳಿ ಲಸಿಕೆ ಇರಲಿಲ್ಲ. ನಾವು ಲಸಿಕೆಗಳಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಅವಲಂಭಿಸಬೇಕಾಯಿತು. ಆಗಿನಿಂದ ಇಲ್ಲಿಯವರೆಗೆ ದೇಶ ಭಾರೀ ಬದಲಾವಣೆ ಹೊಂದಿದೆ. ಈಗ ದೇಶ ಕೋವಿಡ್-19 ಲಸಿಕೆಯನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಅದು ನಾವು ಸಾಧಿಸಿದ ಪ್ರಯಾಣವಾಗಿದೆ ಎಂದು ಗುಲೇರಿಯಾ ಶ್ಲಾಘಿಸಿದರು.

Share This Article
Leave a Comment

Leave a Reply

Your email address will not be published. Required fields are marked *