ಖಾಲಿ ಹೊಡೀತಿದೆ ಇಂದಿರಾ ಕ್ಯಾಂಟೀನ್- ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ

Public TV
1 Min Read

ತುಮಕೂರು: ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಬಡವರಿಗೆ ನೀಡಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದರು. ಮೊದಮೊದಲು ಚೆನ್ನಾಗಿ ನಡೆಯುತ್ತಿದ್ದ ಇಂದಿರಾ ಕ್ಯಾಂಟೀನ್‍ಗಳು ಇದೀಗ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ.

ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯರ ಕನಸಿನ ಕೂಸು. ಅದೆಷ್ಟೋ ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂಥವರಿಗಾಗಿಯೇ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದರು. ನಂತರ ಜಿಲ್ಲೆಗಳಿಗೂ ವಿಸ್ತರಿಸಿದರು. ಸಾವಿರಾರು ಜನ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಮಾಡಿ ತಮ್ಮ ಹಸಿವನ್ನು ನೀಗಿಸಿಕೊಂಡರು. ಆದರೆ ಅತ್ತ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಕೂಡ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ.

ತುಮಕೂರು ನಗರದ ಪಾಲಿಕೆ ಆವರಣ, ಕ್ಯಾತಸಂದ್ರ, ಶಿರಾ ಗೇಟ್ ಹಾಗೂ ಮಂಡಿಪೇಟೆ ಹೀಗೆ ನಗರದ ಒಟ್ಟು ನಾಲ್ಕು ದಿಕ್ಕುಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಮೊದ ಮೊದಲು ಜನ ಕೂಡ ಊಟ, ತಿಂಡಿಗಾಗಿ ಮುಗಿಬೀಳುತ್ತಿದ್ದರು. ಅದೆಷ್ಟೋ ಸಲ ಜನ ಊಟ ಸಿಗದೇ ಕ್ಯಾಂಟೀನ್ ಸಿಬ್ಬಂದಿ ಜೊತೆಗೆ ಜಗಳವಾಡಿರುವ ಪ್ರಸಂಗಗಳೂ ನಡೆದಿದೆ. ಆದರೆ ಇತ್ತೀಚೆಗೆ ಯಾಕೋ ಜನ ಇಂದಿರಾ ಕ್ಯಾಂಟೀನ್‍ನತ್ತ ಸುಳಿಯುತ್ತಿಲ್ಲ.

ಗ್ರಾಹಕರಿಗೆ ಕೊರತೆ ಆಗಬಾರದೆಂಬ ಕಾರಣಕ್ಕೆ ಗುತ್ತಿಗೆದಾರರು ಪ್ರತಿದಿನ 1500 ಜನರಿಗಾಗಿ ಊಟ-ತಿಂಡಿ ತಯಾರಿಸುತ್ತಿದ್ದಾರೆ. ಆದರೆ ಗ್ರಾಹಕರು ಬಾರದಿದ್ದಾಗ ಅನಿವಾರ್ಯವಾಗಿ ಆಹಾರಗಳನ್ನು ಮೋರಿಗೆ ಎಸೆಯುವ ಸ್ಥಿತಿ ಬಂದಿದೆ. ಗುತ್ತಿಗೆದಾರರು ಮಾತ್ರ ದಿನವೊಂದಕ್ಕೆ 1500 ಟೋಕನ್ ಸೇಲ್ ಆದ ಲೆಕ್ಕ ತೋರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *